ರಾಜ್ಯ ಸರ್ಕಾರದಿಂದ 1,250 ಕೋಟಿ ಮೊತ್ತದ ಕೊರೊನಾ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಿಎಂ ಬಿಎಸ್ ವೈ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕರೊನಾ ಎರಡನೇ ಅಲೆಯ ಸಂಕಷ್ಟ ಕಾಲದಲ್ಲಿ ಬಡ ಜನರ ಜೀವನ ನಿರ್ವಹಣೆಗಾಗಿ ಆರ್ಥಿಕ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸುಮಾರು 1, 250 ಕೋಟಿಗೂ ಹೆಚ್ಚು ಮೊತ್ತದ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ ಸಿಎಂ ರಾಜ್ಯದ ಬಹುತೇಕ ಬಡಜನತೆಗೆ ಆರ್ಥಿಕ ನೆರವು ನೀಡಲು ಸಹಾಯ ಹಸ್ತ ಚಾಚಿದೆ. ಹಾಗಾದರೆ ಯಾರು – ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಇಂದು ಮುಂಜಾನೆ ಹಿರಿಯ ಸಚಿವರ ಜೊತೆಗೆ ಸುದೀರ್ಘ ಕಾಲ ಚರ್ಚೆ ನಡೆಸಿದ ಸಿಎಂ ಎಲ್ಲಾ ಸಚಿವರ ಮಾಹಿತಿ ಸಂಗ್ರಹಿಸಿ ಮುಂಜಾನೆ 11:30 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಕೊರೊನಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಬಡ – ಶ್ರಮಿಕ ಕುಟುಂಬಗಳಿಗೆ ಆರ್ಥಿಕ ವಿಶೇಷ ಪ್ಯಾಕೇಜ್ :

● ಪ್ರತಿ ಹೆಕ್ಟೇರ್​ ಹೂವು ಹಾನಿಗೆ 10 ಸಾವಿರ
ರೂಪಾಯಿ ಪರಿಹಾರ ಧನ ನೀಡಲಾಗುವುದು.
● ಆಟೋ-ಟ್ಯಾಕ್ಷಿ ಚಾಲಕರಿಗೆ 3 ಸಾವಿರ ಸಹಾಯಧನ
● ಬೀದಿಬದಿ ವ್ಯಾಪಾರಿಗಳಿಗೆ 3 ಸಾವಿರ ರೂಪಾಯಿ
● ಹೂವು-ಹಣ್ಣು ವರ್ತಕರಿಗೆ 3 ಸಾವಿರ ರೂಪಾಯಿ
● ಕಲಾವಿದರು, ಕಲಾ ತಂಡಗಳಿಗೆ ತಲಾ 3
ಸಾವಿರ ರೂಪಾಯಿ
● ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂಪಾಯಿ
● ಕರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ
ಉಚಿತ ಚಿಕಿತ್ಸೆ
● ಸವಿತಾ ಸಮಾಜದವರಿಗೆ 3 ಸಾವಿರ ರೂಪಾಯಿ
● ಎಪಿಎಲ್​ ಕಾರ್ಡ್​ದಾರರಿಗೆ ಕೆಜಿಗೆ 15
ರೂಪಾಯಿಯಂತೆ ಅಕ್ಕಿ ವಿತರಣೆ
● ಸಹಕಾರಿ ಸಂಘಗಳಿಂದ ಸಾಲ ಪಡೆದವರು ಕಂತು
ಪಾವತಿಸುವ ಅವಧಿಯನ್ನ ಜುಲೈ 30ರವರೆಗೂ
ರಾಜ್ಯ ಸರ್ಕಾರ ಮುಂದೂಡಿದೆ.
● ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಆಹಾರ
ಸಿಗಲಿದೆ.
● ಗ್ಯಾಸ್​ ವಿತರಕರು, ಕೆಇಬಿ ಲೈನ್‌ ಮ್ಯಾನ್ ಹಾಗೂ ಶಿಕ್ಷಕರಿಗೆ ಆದ್ಯತೆಯ ಮೇರೆಗೆ ‘ಪ್ರಂಟ್ ಲೈನ್ ಕೊರೊನಾ ವಾರಿಯರ್’ ಎಂದು ಪರಿಗಣಿಸಲಾಗುವುದು.

ರಾಜ್ಯ ಸರ್ಕಾರ ಕೋವಿಡ್​ ಹಿನ್ನೆಲೆ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್​ಗೆ ಯಾವುದೇ ಹಣದ ಕೊರತೆ ಇಲ್ಲ. ಎಲ್ಲ ಅರ್ಹ ಫಲಾನುಭವಿಗಳಿಗೂ ಸಹಾಯಧನ ತಲುಪಲಿದೆ. ಸಹಾಯಧನ ಅರ್ಹರಿಗೆ ತಲುಪುವಂತೆ ಶಕ್ತಿ ಮೀರಿ ಕೆಲಸ ಮಾಡಲಾಗುವುದು. ಮೇ 24 ಕ್ಕೆ ಮುಗಿಯುವ ಲಾಕ್​ಡೌನ್​ ವಿಸ್ತರಣೆ ಮಾಡುವ ಬಗ್ಗೆ ಇಂದು ಚರ್ಚೆ ಆಗಿಲ್ಲ. ಈ ಬಗ್ಗೆ ಮೇ 23ರಂದು ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕೋವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅವರಿಗೆ ಶಿಕ್ಷಣ ಹಾಗೂ ಪಾಲನೆಯ ಬಗ್ಗೆ ಒಂದೆರಡು ದಿನದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಿಎಂ ಬಿಎಸ್ ವೈ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು