ರಾಜ್ಯ ಸರ್ಕಾರ ಸಾರಿಗೆ ನಿಗಮಗಳನ್ನು ಮುಳುಗಿಸುವ ಹುನ್ನಾರ ನಡೆಸುತ್ತಿದೆ : ಕಾಂಗ್ರೆಸ್ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸರ್ಕಾರ ಸಾರಿಗೆ ನಿಗಮಗಳ ಖಾಸಗೀಕರಣದ ಉದ್ದೇಶಕ್ಕೆ ಇತ್ತ ನೌಕರರಿಗೂ ಕಿರುಕುಳ ನೀಡುತ್ತಿದೆ, ಅತ್ತ ಪ್ರಯಾಣಿಕರಿಗೂ ತೊಂದರೆ ನೀಡುತ್ತಿದೆ. ಸಾರಿಗೆ ನಿಗಮಗಳ ಮಾರಾಟವೇ ಈ ಸರ್ಕಾರದ ಉದ್ದೇಶ, ಸಾರ್ವಜನಿಕರು ಎಚ್ಚರಗೊಳ್ಳದೆ ಹೋದಲ್ಲಿ ಮುಂದೆ ಖಾಸಗಿ ಕಂಪೆನಿಗಳ ದಬ್ಬಾಳಿಕೆ, ಸುಲಿಗೆ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಸಾರಿಗೆ ನೌಕರರ ಮುಷ್ಕರವನ್ನು ಬೆಂಬಲಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಒಂದೆಡೆ ಯುಗಾದಿ ಹಬ್ಬ ಹಾಗೂ ದೀರ್ಘ ರಜೆಗಳಿರುವ ಕಾರಣ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮತ್ತೊಂದೆಡೆ ಲಾಕ್‌ಡೌನ್ ಆಗಬಹುದೆನ್ನುವ ಭೀತಿಯಲ್ಲಿ ವಲಸೆ ಕಾರ್ಮಿಕರು ಊರು ಸೇರಿಕೊಳ್ಳುವ ಧಾವಂತದಲ್ಲಿದ್ದಾರೆ.

ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಲ್ಲಿ ದುಪ್ಪಟ್ಟು ದರ ಸುಲಿಗೆಗಿಳಿದಿದ್ದಾರೆ ರಾಜ್ಯ ಬಿಜೆಪಿ ಸರ್ಕಾರ ಸಾರಿಗೆ ನೌಕರ ಸಮಸ್ಯೆಗಳನ್ನು ಬಗೆಹರಿಸದೆ ಬೇಕಂತಲೇ ಅವರನ್ನು ಇನ್ನಷ್ಟು ಶೋಷಿಸುತ್ತಾ, ದಬ್ಬಾಳಿಕೆ ನಡೆಸಿ ಹತಾಶರನ್ನಾಗಿಸುವ ಕೆಲಸ ಮಾಡುತ್ತಾ ಖಾಸಗೀಕರಣದ ತನ್ನ ಮೂಲ ಉದ್ದೇಶಕ್ಕೆ ವಾತಾವರಣ ಹದ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ನೌಕರರ ವೇತನ ಹೆಚ್ಚಿಸುವ ಅವಕಾಶಗಳಿದೆ .
ಆದರೆ ಸರ್ಕಾರಕ್ಕೆ ನೌಕರರ ಹಿತ ಬೇಕಿಲ್ಲ.
ನೌಕರರು ಚೆನ್ನಾಗಿದ್ದರೆ ಸಾರಿಗೆ ಸಂಸ್ಥೆಗಳು ಚೆನ್ನಾಗಿರುತ್ತವೆ. ಆದರೆ ಈ ಸರ್ಕಾರಕ್ಕೆ ಸಾರಿಗೆ ಸಂಸ್ಥೆಗಳು ಚೆನ್ನಾಗಿರುವುದು ಬೇಕಿಲ್ಲ.
ಸಂಸ್ಥೆಗಳು ಉತ್ತಮವಾಗಿದ್ದರೆ ಖಾಸಗೀಕರಣಕ್ಕೆ ಬೇರೆ ಸಬೂಬು ಸಿಗುವುದಿಲ್ಲ. ಹೀಗಾಗಿ ಸಾರಿಗೆ ನಿಗಮಗಳನ್ನು ಮುಳುಗಿಸುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು