ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಬಸ್ಸುಗಳು, ಪ್ರಯಾಣಿಕರ ಪರದಾಟ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಸರಕಾರವು ಪ್ರಯಾಣಿಕರಿಗೆ ತೊಂದರೆಯಾಗದಂತೆ ಖಾಸಗೀ ಬಸ್ಸುಗಳನ್ನು ರಸ್ತೆಗಿಳಿಸಿದರೂ, ಅದರಿಂದ ಸಂಪೂರ್ಣ ಪರಿಹಾರ ದೊರೆತಿಲ್ಲ.

ಆರನೇ ವೇತನ ಆಯೋಗ ಶಿಫಾರಸು ಜಾರಿ ಮಾಡಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುವ ಮುಷ್ಕರದಿಂದಾಗಿ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಇಂದು ರಸ್ತೆಗಿಳಿದಿಲ್ಲ.  ಅಲ್ಲಲ್ಲಿ ಖಾಸಗೀ ಬಸ್ಸುಗಳ ಸಂಚಾರವಷ್ಟೇ ಕಂಡುಬಂದಿದೆ.

ಬೇಡಿಕೆಗೆ ಮಣಿಯದ ಸರಕಾರವು ಮುಷ್ಕರ ನಿರತ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸುವ ಬೆದರಿಕೆ ಹಾಕಿದರೂ ಸಾರಿಗೆ ನೌಕರರು ಕ್ಯಾರೇ ಎನ್ನಲಿಲ್ಲ. ಅನಿರ್ಧಿಷ್ಠಾವಧಿಯ ಮುಷ್ಕರದಿಂದಾಗಿ ಇಂದಿನಿಂದ ಇಪ್ಪತ್ತನಾಲ್ಕು ಸಾವಿರ ಬಸ್ಸುಗಳು ಸಂಚಾರ ನಡೆಸುವುದಿಲ್ಲ.

ಬೆಳಿಗ್ಗೆ ನಲ್ವತ್ತು ಶೇಕಡಾ ಬಸ್ಸುಗಳಷ್ಟೇ ಸಂಚರಿಸುತ್ತಿದ್ದರೂ, ಮಧ್ಯಾಹ್ನದ ನಂತರ ಸಂಪೂರ್ಣವಾಗಿ ಸ್ತಬ್ಧವಾಗುವ ಮುನ್ಸೂಚನೆ ದೊರೆತಿದೆ. ನಡುವೆ ಮುಷ್ಕರದ ಲಾಭ ಪಡೆದುಕೊಂಡ ಖಾಸಗೀ ಬಸ್ಸುಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿದೆ.

ಹೆಚ್ಚಿನ ಖಾಸಗಿ ಬಸ್ಸುಗಳಿರುವ ಕರಾವಳಿ ಭಾಗದಲ್ಲಿ ಮುಷ್ಕರವು ಅಷ್ಟೊಂದು ಪರಿಣಾಮ ಬೀರಿಲ್ಲ. ಬಸ್ಸುಗಳ ಓಡಾಟ ಎಂದಿನಂತೆ ಕಂಡು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು