ರಾಜ್ಯ ಬಿಜೆಪಿ ಸರ್ಕಾರ ಈಗ ‘ಹರಿದ ಬನಿಯನ್’ : ಕಾಂಗ್ರೆಸ್ ವ್ಯಂಗ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬಿಜೆಪಿ – ಕಾಂಗ್ರೆಸ್ ನಡುವಿನ ಟ್ವಿಟ್ಟರ್ ಸಮರ ಇನ್ನೂ ಮುಂದುವರಿದಿದೆ. ಬಿಜೆಪಿಯ ಹಿರಿಯ ಸಚಿವರೊಬ್ಬರು ನಿನ್ನೆ ತಮ್ಮ ಸರ್ಕಾರದ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಕುರಿತು ಕಾಂಗ್ರೆಸ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್
“ಸಚಿವರೊಬ್ಬರು ತಮ್ಮದೇ ಮುಖ್ಯಮಂತ್ರಿ ವಿರುದ್ಧ ಸಂಪುಟ ಸಭೆಯಲ್ಲಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಇದರೊಂದಿಗೆ ಸರ್ಕಾರ ರಚಿಸಲು ಬಳಸಿದ ವಾಮಮಾರ್ಗಗಳ ಬಗೆಗಿನ ತನಿಖೆಗೆ ಕೋರ್ಟ್ ಆದೇಶಿಸಿದೆ. ಬಿಜೆಪಿ ನಿಮ್ಮ ಈ ಅಕ್ರಮ ಸರ್ಕಾರಕ್ಕೆ ಒಂದು ಕ್ಷಣವೂ ಮುಂದುವರೆಯುವ ನೈತಿಕತೆ ಇಲ್ಲ” ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿದೆ.

‘ರಾಜ್ಯ ಬಿಜೆಪಿ ಸರ್ಕಾರ ಈಗ “ಹರಿದ ಬನಿಯನ್” ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ! ಬಿಜೆಪಿಗರ ಮಾತು ಕೇಳಿದಾಗಳೆಲ್ಲ ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿಯೇ ಮೊದಲು ಹುಟ್ಟಿದ್ದೋ? ಅನುಮಾನ ಮೂಡುತ್ತದೆ ಎಂದು ವ್ಯಂಗ್ಯ ಮಾಡಿದೆ.

ಎಳೆ ಕೂಸು ತೇಜಸ್ವಿ ಸೂರ್ಯ ಅವರೇ
ಶಾಸಕ ರವಿ ಸುಬ್ರಹ್ಮಣ್ಯ ನಿಮ್ಮ ಚಿಕ್ಕಪ್ಪ ಅಲ್ಲವೇ?!
ಕುಟುಂಬ ರಾಜಕಾರಣವೇ ಇಲ್ಲ ಎಂದು ರಾಜಾರೋಷವಾಗಿ ಸುಳ್ಳಾಡುವ ಬಿಜೆಪಿಗರೇ.
ನಿಮ್ಮವರ DNA ಪರೀಕ್ಷೆ ಮಾಡಿಸೋಣವೇ?
ಅನುಮಾನ ಬಗೆಹರಿದುಬಿಡಲಿ! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಮ್ಮ ಮನೆಯ ಮಾಳಿಗೆಯೇ ಸೋರುತ್ತಿದೆ, ಕುಸಿದು ಬೀಳುವ ಹಂತದಲ್ಲಿದೆ ಪಕ್ಕದ ಮನೆಯ ಮಾಳಿಗೆಯನ್ನೇಕೆ ಹಿಣುಕುವಿರಿ!?

ಸುಧಾಕರ್ vs ರೇಣುಕಾಚಾರ್ಯ, ಆರ್ ಅಶೋಕ್ vs ಅಶ್ವಥ್ ನಾರಾಯಣ್, ಯಡಿಯೂರಪ್ಪ vs ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ತಲೆಮರೆಸಿಕೊಂಡ ಬೆನ್ನೆಲುಬಿಲ್ಲದ ಬಿಜೆಪಿಯವರಿಗೆ ಮೊದಲು ಕಿತ್ತಾಟ ನಿಭಾಯಿಸಲು ಹೇಳಿ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿಯನ್ನು ಆರೋಪಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು