ಬಾಬರಿ ಮಸೀದಿಯ  ಬಾಗಿಲು ತೆರೆಯುವ ಬಗ್ಗೆ ಮಾಜಿ ರಾಜೀವ್ ಗಾಂಧಿಯವರಿಗೆ ಮಾಹಿತಿ ಇರಲಿಲ್ಲ: ಮಾಜಿ ಐಎಎಸ್‌ ಅಧಿಕಾರಿ ವಜಾಹತ್‌ ಹಬೀಬುಲ್ಲಾ

wajahat habibullah
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೊಸದೆಹಲಿ(01/11/2020):  ಬಾಬರಿ ಮಸೀದಿಯ  ಬಾಗಿಲು ತೆರೆಯುವ ಬಗ್ಗೆ ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರಿಗೆ ಮಾಹಿತಿ ಇರಲಿಲ್ಲ ಎಂದು  ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ವಜಾಹತ್‌ ಹಬೀಬುಲ್ಲಾ ಹೇಳಿದ್ದಾರೆ.

ಬಾಬರೀ ಮಸೀದಿಯ ಬಾಗಿಲು ತೆರೆಯುವ ನಿರ್ಧಾರವನ್ನು ರಾಜೀವ್ ಗಾಂಧಿಗೆ ತಿಳಿಯದಂತೆ ನೋಡಿಕೊಳ್ಳುವ ಉಸ್ತುವಾರಿಯನ್ನು ಅರುಣ್ ನೆಹರು ಮತ್ತು ಎಂ.ಎಲ್ ಫೋತೆದಾರ್‌ ವಹಿಸಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ನಿವೃತ್ತ ಮುಖ್ಯ ಮಾಹಿತಿ ಆಯುಕ್ತರಾಗಿರುವ ಹಬೀಬುಲ್ಲಾ ಪ್ರಧಾನಮಂತ್ರಿಯ ವಿಶೇಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಶಾ ಬಾನು ತೀರ್ಪಿನ ನಂತರದ ಘಟನೆಗಳು ತೀವ್ರವಾಗಿ ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಅವರನ್ನು ಸಮಾಧಾನ ಪಡಿಸಲು ಬಾಬರಿ ಮಸೀದಿಯ ಬಾಗಿಲುಗಳನ್ನು ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತು ಎಂದು ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ‘ಮೈ ಇಯರ‍್ಸ್‌ ವಿತ್‌ ರಾಜೀವ್‌’ ಎಂಬ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು