ನವದೆಹಲಿ(18-12-2020): ದೆಹಲಿ ಮತ್ತು ರಾಜಸ್ಥಾನದಲ್ಲಿ ತಡರಾತ್ರಿ ಪ್ರಬಲ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದೆ.
ಭೂಕಂಪನದ ತೀವ್ರತೆ ದೆಹಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಕೂಡ ಇಷ್ಟೇ ತೀವ್ರತೆಯ ಭೂಕಂಪನ ದಾಖಲಾಗಿದೆ.
ನಿನ್ನೆ ತಡರಾತ್ರಿ 11.46 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಪ್ರಾಣಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ.
ಹರಿಯಾಣದ ಗುರುಗಾಂವ್ ನಿಂದ ನೈಋತ್ಯಕ್ಕೆ 48 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ತಜ್ಞರು ಹೇಳಿದ್ದಾರೆ.