ಒಂದೇ ದಿನದಲ್ಲಿ 9 ಶಿಶುಗಳ ಮರಣ| ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಮಹಾಪ್ರಮಾದ!

infants
Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೈಪುರ(11-12-2020): ರಾಜಸ್ಥಾನದ ಕೋಟಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂಬತ್ತು ನವಜಾತ ಶಿಶುಗಳು ಒಂದೇ ದಿನವೇ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೆ ಕೆ ಲೋನ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಐದು ಶಿಶುಗಳು ಮತ್ತು ನಿನ್ನೆ ನಾಲ್ಕು ಶಿಶುಗಳು ಸಾವನ್ನಪ್ಪಿವೆ. ಮೃತಪಟ್ಟ ಶಿಶುಗಳು 1-4 ದಿನಗಳ ವಯಸ್ಸಿನದಾಗಿದೆ.

ಈ ಕುರಿತು ತನಿಖೆಗೆ ಆರೋಗ್ಯ ಸಚಿವ ರಘು ಶರ್ಮಾ ಸೂಚಿಸಿದ್ದಾರೆ. ಆಸ್ಪತ್ರೆಯ ಅಧೀಕ್ಷಕ ಸುರೇಶ್ ದುಲಾರಾ, ಯಾವುದೇ ಅಸಾಮಾನ್ಯ ಅಥವಾ ತೀವ್ರವಾದ ಕಾರಣ ಅಥವಾ ಸೋಂಕಿನಿಂದ ಶಿಶುಗಳ ಸಾವುಗಳು ಸಂಭವಿಸಿಲ್ಲ. ಇದೊಂದು ಸಹಜ ಸಾವು ಎಂದು ಹೇಳಿದ್ದಾರೆ.

ಕೋಟಾ ವೈದ್ಯಕೀಯ ಕಾಲೇಜು ಪ್ರಾಂಶುಪಾಲರ ಪ್ರಕಾರ, ಮೂರು ಶಿಶುಗಳನ್ನು ಜೆ ಕೆ ಲೋನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅದು ಜನ್ಮಜಾತ ಸಮಸ್ಯೆಯಿಂದ ಮೃತಪಟ್ಟಿದೆ. ಉಳಿದ ಶಿಶುಗಳು ಹಠಾತ್ ಮೃತಪಟ್ಟಿದೆ. ಎಂದು ಆರೋಗ್ಯ ಸಚಿವರಿಗೆ ಕಳುಹಿಸಿದ ವರದಿಯಲ್ಲಿ  ತಿಳಿಸಿದ್ದಾರೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು