ರೈತರಿಂದ ದೇಶ ವ್ಯಾಪಿ ‘ಸಂಪೂರ್ಣ ಕ್ರಾಂತಿ ದಿನ’ ಆಚರಣೆ | ಬಿಜೆಪಿ ನಾಯಕರ ಮನೆ ಮುಂದೆ ಪ್ರದರ್ಶನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಸರಕಾರದ ರೈತ ವಿರೋಧೀ ಕಾನೂನುಗಳನ್ನು ವಿರೋಧಿಸಿ, ದೇಶವ್ಯಾಪಿಸಂಪೂರ್ಣ ಕ್ರಾಂತಿ ದಿನಆಚರಿಸಲಾಯಿತು. ಕೃಷಿ ಕಾಯ್ದೆಗಳ ಸುಗ್ರೀವಾಜ್ಞೆ ಹೊರಡಿಸಿ, ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತರಿಂದ ತೀವ್ರ ಪ್ರತಿಭಟನೆ ಎದುರಾಗಿದೆ.

ನಿರಂತರ ರೈತ ಹೋರಾಟ ನಡೆಯುತ್ತಿರುವ ದೆಹಲಿ ಗಡಿಗಳಲ್ಲೂ, ಇನ್ನಿತರ ದೇಶದ ಹಲವು ಕಡೆಗಳಲ್ಲೂ ರೈತರು ಸರಕಾರದ ವಿರುದ್ಧ ಪ್ರದರ್ಶನ ನಡೆಸಿದರು. ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ತೆಲಂಗಾಣ, ತ್ರಿಪುರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಪ್ರತಿಭಟನೆ ಆಯೋಜಿಸಿದ್ದರು. ರೈತ ಕಾಯ್ದೆಗಳ ಪ್ರತಿಗಳನ್ನು ಸುಡುವುದು, ಕಪ್ಪು ದ್ವಜ ಪ್ರದರ್ಶನ, ರೈತ ಪರ ಘೋಷಣೆ, ಮೆರವಣಿಗೆ ಇತ್ಯಾದಿಗಳು ಪ್ರತಿಭಟನೆಗಳಲ್ಲಿ ಕಂಡುಬಂತು.

ಹರ್ಯಾಣದ ಹಲವು ಕಡೆಗಳಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಹರ್ಯಾಣ ಗೃಹ ಸಚಿವ ಅನಿಲ್ ವಿಜಯ್ ಮನೆಯೆದುರು ಕೂಡಾ ಪೋಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಉಂಟಾಯಿತು.

ಪಂಜಾಬಿನಲ್ಲಿ ಬಿಜೆಪಿ ನಾಯಕರ ಮನೆಗಳಿಗೆ ರೈತರು ಮಾರ್ಚ್ ನಡೆಸಿದಾಗ, ಅವರನ್ನು ತಡೆಯಲು ಲಾಠಿ ಚಾರ್ಜ್ ಮಾಡಲಾಯಿತು. ಕೇಂದ್ರ ಸಚಿವ ಸೋಮ್‌ ಪ್ರಕಾಶ್‌ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದ ರೈತರು, ಅವರ ನಿವಾಸದೆದುರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಹಲವು ಕಡೆಗಳಲ್ಲಿ ಸಂಪೂರ್ಣ ಕ್ರಾಂತಿ ದಿನ ಬಿಸಿ ಕಂಡು ಬಂತು. ಕೋಲಾರ ತಾಲೂಕು ಕಛೇರಿ ಮುಂಬಾಗದಲ್ಲಿ ಕೃಷಿ ಕಾಯ್ದೆಗಳ ಪ್ರತಿಯನ್ನು ಸುಡಲಾಗಿದೆ. ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಪ್ರದರ್ಶನ ನಡೆಸಿದರು. ರೈತಪರ ಸಂಘಟನೆಗಳಲ್ಲದೇ ಕಾರ್ಮಿಕ ಸಂಘನೆಗಳು, ಪ್ರಗತಿಪರ ಸಂಘಟನೆಗಳೂಸಂಪೂರ್ಣ ಕ್ರಾಂತಿದಿನವನ್ನು ಬೆಂಬಲಿಸಿದ್ದವು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು