‘ರೈತ ಮಹಾಪಂಚಾಯತ್‌’ಗೆ ಸಜ್ಜಾದ ಶಿವಮೊಗ್ಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಶಿವಮೊಗ್ಗ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲವಾಗಿ ನಿಂತ ರಾಜ್ಯದ ರೈತ ಸಂಘಟನೆಗಳು ಈಗ ಮತ್ತೊಂದು ಐತಿಹಾಸಿಕ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಐಕ್ಯ ಹೋರಾಟ ಸಮಿತಿ ಈಗ
ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಸಲು ಮುಂದಾಗಿದೆ. ಇದೇ ಶನಿವಾರ(ಮಾ.20)ರಂದು ಶಿವಮೊಗ್ಗ ನಗರದ ಸರ್ಕಾರಿ ಸೈನ್ಸ್‌ ಕಾಲೇಜು ಮೈದಾನದಲ್ಲಿ ಜರುಗಲಿದೆ.ಇಡೀ ದಕ್ಷಿಣ ಭಾರತದ ಮೊಟ್ಟ ಮೊದಲ ಮಹಾಪಂಚಾಯತ್ ಇದಾಗಿದೆ.

ಈ ಬೃಹತ್ ಸಮಾವೇಶದಲ್ಲಿ ರಾಷ್ಟ್ರ ಮಟ್ಟದ ರೈತ ಸಂಘಟಕರು, ದೆಹಲಿ ಹೋರಾಟದ ರೂವಾರಿಗಳಾದ ಭಾರತೀಯ ಕಿಸಾನ್‌ ಯೂನಿಯನ್‌ ನಾಯಕರಾದ ರಾಕೇಶ್ ಟಿಕಾಯತ್‌, ದರ್ಶನ್‌ ಪಾಲ್‌, ಯುದ್ವೀರ್‌, ಯೋಗೇಂದ್ರ ಯಾದವ್ ಆಗಮಿಸಲಿದ್ದಾರೆ.

ಬೆಂಗಳೂರಿನಿಂದ ರೈತರ ದಂಡು ಬರಲಿದೆ, ಈ ಸಮಾವೇಶಕ್ಕೆ ರಾಜ್ಯದ ಹಲವಾರು ಸಂಘಟನೆಗಳು, ಅನ್ನ ಬೆಳೆಯುವ ಎಲ್ಲರೂ ಇದನ್ನು ಬೆಂಬಲಿಸುತ್ತಿದ್ದಾರೆ. ರಾಜ್ಯದ ವಿವಿಧ ಮಠಾಧೀಶರು, ವಿಚಾರವಾದಿಗಳು, ಬರಹಗಾರ, ಸಾಹಿತಿಗಳು ಅಂದು ಪಾಲ್ಗೊಳ್ಳಲ್ಲಿದ್ದಾರೆ. ಪ್ರತಿಯೊಬ್ಬರೂ ರೈತ ಹೋರಾಟದ ದೀಕ್ಷೆ ತೊಟ್ಟಿದ್ದೇವೆ. 15 ದಿನಗಳಿಂದ ನಿರಂತರವಾಗಿ ಸಿದ್ಧತೆ ನಡೆದಿದೆ. ಹಳ್ಳಿಹಳ್ಳಿಗಳಿಗೆ ತೆರಳಿ ಪ್ರವಾಸ ಮಾಡಿದ್ದೇವೆ. ಎಲ್ಲಾ ಕಡೆಯಿಂದಲೂ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದೆ. ಎಲ್ಲ ಸಮುದಾಯಗಳೂ ಜಾತಿ, ಪಕ್ಷ ಭೇದ ಮರೆತು ಬೆಂಬಲ ನೀಡಿವೆ.

ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಬರುತ್ತಾರೆ. ಐತಿಹಾಸಿಕ ಸಮ್ಮೇಳನವಾಗಿ ದಾಖಲಾಗುತ್ತದೆ ಎಂದು ಮುಖಂಡರಾದ ಕೆ.ಟಿ.ಗಂಗಾಧರ್, ಎಚ್‌.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಕೆ.ಎಲ್.ಅಶೋಕ್, ಎಂ.ಗುರುಮೂರ್ತಿ, ಎನ್.ರಮೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

20 ರಂದು ಬೆಳಿಗ್ಗೆ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಡಾ.ದರ್ಶನ್‌ಪಾಲ್, ಯುದ್ದವೀರ್ ಸಿಂಗ್ ಬೆಂಗಳೂರಿನಿಂದ ಹೊರಟು ಭದ್ರಾವತಿಗೆ 1.30ಕ್ಕೆ ತಲುಪುವರು. ಅಲ್ಲಿ ಊಟ ಮುಗಿಸಿದ ನಂತರ ನೇರವಾಗಿ ಸೈನ್ಸ್ ಮೈದಾನದ ವೇದಿಕೆಗೆ ಆಗಮಿಸುವರು. ಕೋವಿಡ್ ಮಾರ್ಗಸೂಚಿ ಅನ್ವಯ ಜಿಲ್ಲಾಧಿಕಾರಿ ಮನವಿಯ ಮೇರೆಗೆ ಮೆರವಣಿಗೆ ರದ್ದು ಮಾಡಲಾಗಿದೆ. ವೇದಿಕೆ ಕಾರ್ಯಕ್ರಮವು 3ಕ್ಕೆ ಆರಂಭವಾಗುತ್ತದೆ. ಸಂಜೆ 4ಕ್ಕೆ ಮಹಾ ಪಂಚಾಯತ್ ಆರಂಭವಾಗಲಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಎನ್.ಮಂಜುನಾಥ, ಹಾಲೇಶಪ್ಪ, ಯೋಗೀಶ್, ಪಂಡಿತ್‌ ವಿ.ವಿಶ್ವನಾಥ್‌, ಶಿ.ಜು.ಪಾಶ, ಕೆ.ಎಲ್.ಅಶೋಕ್ ಇದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು