ಹಮಾವಾನ ವರದಿ; ರಾಜ್ಯದಲ್ಲಿ 3ದಿನ ಭಾರೀ ಮಳೆ ಸಾಧ್ಯತೆ| ಕಾರಣ ಏನು ಗೊತ್ತಾ?

raining
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(01-10-2020): ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಕಾರಣದಿಂದಾಗಿ ರಾಜ್ಯದಲ್ಲಿ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಅ. 3 ರವರೆಗೆ ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಒಂದು ವಾರದ ಮೊದಲು ರಾಜ್ಯದ ಕರಾವಳಿಯಲ್ಲಿ ಎಡೆಬಿಡದೆ ಬಂದ ಮಳೆ ಹವಾಂತರವನ್ನು ಸೃಷ್ಟಿಸಿತ್ತು. ಉಡುಪಿ ಮಂಗಳೂರಿನ ಕೆಲವೆಡೆ

ಕೃತಕ ನೆರೆಯನ್ನುಂಟುಮಾಡಿತ್ತು. ಇದೀಗ ಮತ್ತೆ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು