ನವದೆಹಲಿ(24-10-2020): ಕಳೆದ 50ವರ್ಷಗಳಿಂದ ಸಂಸದರಿಗೆ ಮತ್ತು ಅಧಿಕಾರಿಗಳಿಗೆ ಊಟ ಬಡಿಸಿದ್ದ ಭಾರತೀಯ ರೈಲ್ವೆ ನ.15ರಿಂದ ತಮ್ಮ ಕೆಲಸವನ್ನು ಸ್ಥಗಿತಗೊಳಿಸಲಿದೆ.
ಹೊಸ ಏಜನ್ಸಿಗಳಿಗೆ ಕ್ಯಾಂಟಿನ್ ನ್ನು ವಹಿಸಿಕೊಡಲಾಗಿದೆ. ಮುಂದೆ ಈ ಜವಾಬ್ದಾರಿಯನ್ನು ಪ್ರವಾಸ ಅಭಿವೃದ್ಧಿ ನಿಗಮ (ಐಟಿಡಿಸಿ ) ನಿರ್ವಹಿಸಲಿದೆ. ಪ್ರಸ್ತುತ ಅಶೋಕ್ ಪಂಚತಾರಾ ಹೋಟೆಲ್ ಸಮೂಹವನ್ನ ಐಟಿಡಿಸಿ ನಿರ್ವಹಿಸುತ್ತಿದೆ.
1968ರಿಂದ ಸಂಸದರಿಗೆ ಮತ್ತು ಅಧಿಕಾರಿಗಳಿಗೆ ಭಾರತೀಯ ಉತ್ತರ ರೈಲ್ವೆ ಭೋಜನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿತ್ತು.