ರೈಲ್ವೇ ಪೋಲೀಸ್ ವಶದಲ್ಲಿದ್ದ ಮೃತದೇಹವನ್ನು ಇಲಿಗಳು ಕಚ್ಚಿ ತಿಂದವು | ರೈಲ್ವೇ ಪೊಲೀಸರ ವಿರುದ್ಧ ಕೇಸು ದಾಖಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭೋಪಾಲ್(22-11-2020): ರೈಲು ಚಲಿಸುತ್ತಿರುವಾಗಲೇ ಮರಣ ಹೊಂದಿದ ಪ್ರಯಾಣಿಕರೊಬ್ಬರ ಮೃತದೇಹವನ್ನು ಇಲಿಗಳು ತಿಂದ ಘಟನೆ ಜರುಗಿದೆ. ಇದು ರೈಲ್ವೇ ಪೋಲೀಸರ ನಿರ್ಲಕ್ಷ್ಯತನವೆಂದು ಆರೋಪಿಸಲಾಗಿದೆ.

ಮಧ್ಯಪ್ರದೇಶದ ಇಟಾರ್ಸಿ ನಗರದಲ್ಲಿ ಈ ಘಟನೆ ನಡೆದಿದ್ದು, ಮರಣ ಹೊಂದಿದವರ ಕುಟುಂಬಿಕರು ನೀಡಿದ ದೂರಿನನ್ವಯ ರೈಲ್ವೇ ಪೋಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆಗ್ರಾದ ನಿವಾಸಿಯಾಗಿರುವ ಜಿತೇಂದ್ರ ಸಿಂಗ್ ಎಂಬವರು ಬೆಂಗಳೂರಿನಿಂದ ರೈಲು ಮೂಲಕ ದೆಹಲಿಗೆ ಹೋಗುವ ಸಮಯದಲ್ಲಿ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಮೃತಪಟ್ಟಿರುವುದೆಂದು ದೃಢವಾಗಿತ್ತು.

ಬಳಿಕ ಮೃತದೇಹವನ್ನು ರೈಲ್ವೇ ಪೋಲೀಸ್ ಸ್ಟೇಷನ್ ಹತ್ತಿರದಲ್ಲೇ ಇದ್ದ ಒಂದು ಗುಡಿಸಲಿನಲ್ಲಿ ಇಡಲಾಗಿತ್ತು. ಜೊತೆಗೆ ಒಬ್ಬ ಕಾವಲುಗಾರನನ್ನೂ ನೇಮಿಸಲಾಗಿತ್ತು. ಅದರೆ ಮೃತರಾದವರ ಕುಟುಂಬಿಕರು ಬಂದು ನೋಡಿದಾಗ, ಇಲಿಗಳು ಕಚ್ಚಿ ತಿಂದು, ಎರಡು ಕಣ್ಣುಗಳು ಕಿತ್ತು ಹೋದ ಸ್ಥಿತಿಯಲ್ಲಿ ಕಂಡು ಬಂದಿತ್ತು.

ಸದ್ರಿ ಪೋಲೀಸ್ ಸ್ಟೇಷನಿನಲ್ಲಿ ಶವಾಗಾರದ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣವೆಂದೂ, ಹಲವು ಬಾರಿ ಶವಾಗಾರಕ್ಕಾಗಿ ಮನವಿ ಸಲ್ಲಿಸಿದರೂ, ಸಂಬಂಧಪಟ್ಟವರು ವ್ಯವಸ್ಥೆ ಮಾಡಿರಲಿಲ್ಲವೆಂದೂ ರೈಲ್ವೇ ಪೋಲೀಸರು ಹೇಳಿದ್ದಾರೆ.

ಮಧ್ಯಪ್ರದೇಶದ ಅತೀ ದೊಡ್ಡ ರೈಲ್ವೇ ಜಂಕ್ಷನ್ ಆಗಿರುವ ಇಟಾರ್ಸಿಯಲ್ಲಿ ಪ್ರತಿ ತಿಂಗಳು ನಾಲ್ಕರಿಂದ ಆರರಷ್ಟು ಮೃತದೇಹಗಳು ರೈಲುಗಳಲ್ಲಿ ಸಿಗುತ್ತವೆ. ಇದಕ್ಕೂ ಮೊದಲು ಹಲವು ಬಾರಿ ಇಲ್ಲಿ ಮೃತದೇಹಗಳನ್ನು ತೆಗೆದಿರಿಸಲಾಗಿದ್ದರೂ, ಇಲಿಗಳು ತಿಂದ ಘಟನೆ ನಡೆದಿರುವುದು ಇದೇ ಮೊದಲ ಬಾರಿಯೆಂದು ಅಲ್ಲಿನ ಪೋಲೀಸ್ ಸಿಬ್ಬಂದಿಗಳು ವಿವರಿಸುತ್ತಾರೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು