ಅಮಾನತುಗೊಂಡಿದ್ದ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಮತ್ತೆ ಚಾಲ್ತಿಗೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅತ್ಯಾಚಾರಕ್ಕೀಡಾಗಿದ್ದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬದ ಫೋಟೋಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಅಮಾನತುಗೊಂಡಿದ್ದ ರಾಹುಲ್ ಗಾಂಧಿಯ ಟ್ವಿಟರ್‌ ಖಾತೆ ಶನಿವಾರ ಮತ್ತೆ ಮರುಸ್ಥಾಪನೆಗೊಂಡಿದೆ ಎಂದು ಕಾಂಗ್ರೆಸ್‌ ಹೇಳಿದೆ.

“ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಅನ್‌ಲಾಕ್ ಮಾಡಲಾಗಿದೆ” ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ. ರಾಹುಲ್‌ ಗಾಂಧಿಯ ಖಾತೆಯೊಂದಿಗೆ ಅಮಾನತುಗೊಂಡ ಇತರ ಕೆಲವು ನಾಯಕರ ಖಾತೆಗಳನ್ನು ಸಹ ಮರುಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್ ಕಾಂಗ್ರೆಸ್ ಪಕ್ಷ ಮತ್ತು ಅದರ ಹಲವು ನಾಯಕರ ಖಾತೆಗಳನ್ನು ಲಾಕ್ ಮಾಡಿದ ಒಂದು ದಿನದ ನಂತರ, ಆಗಸ್ಟ್ 13 ರ ಶುಕ್ರವಾರದಂದು ವಿಡಿಯೋವೊಂದನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧ, ಟ್ವಿಟರ್‌ನ ಈ ಕ್ರಮದ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದ್ದರು.

“ಇದು ದೇಶದ ಪ್ರಜಾಪ್ರಭುತ್ವ ಸಂರಚನೆಯ ಮೇಲಿನ ದಾಳಿ” ಎಂದು ರಾಹುಲ್‌ ಗಾಂಧಿ “ಟ್ವಿಟ್ಟರ್‌ನ ಅಪಾಯಕಾರಿ ಆಟ” ಎಂಬ ಶೀರ್ಷಿಕೆಯಿರುವ ವೀಡಿಯೊದಲ್ಲಿ ಹೇಳಿದ್ದರು

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು