ಮೋದಿ ಸರಕಾರ ದೇಶದ ಬುನಾದಿಯನ್ನೇ ದುರ್ಬಲಗೊಳಿಸುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ

rahul gandhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಂಡೀಗಡ (17/10/2020): ‘ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಬುನಾದಿಯನ್ನೇ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಸ್ಮಾರ್ಟ್ ಹಳ್ಳಿ ಅಭಿಯಾನ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿದ ಅವರು, ಕೇಂದ್ರ ಸರಕಾರವು ನೂತನವಾಗಿ ಜಾರಿ ತಂದಿರುವ ಕೃಷಿ ಮಸೂದೆಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕೇಂದ್ರ ಸರಕಾರವು ಕೃಷಿ ಕಾನೂನಿನ ಮೂಲಕ ರೈತರ ರಕ್ತ ಹೀರಲು ಹೊರಟಿದೆ. ದೇಶದ ರೈತರನ್ನು ದುರ್ಬಲಗೊಳಿಸುವ ಮೂಲಕ ದೇಶವನ್ನೇ ದುರ್ಬಲಗೊಳಿಸಲು ಹೊರಟಿದೆ ಎಂದರು.

‘ಈ ಕಾನೂನಿನ ಕುರಿತು ಚರ್ಚಿಸಲು ಪಂಜಾಬ್‌ ಸರ್ಕಾರ ಅ.19ರಂದು ವಿಶೇಷ ಅಧಿವೇಶನ ಕರೆದಿದ್ದು, ಇದು ಸ್ವಾಗತಾರ್ಹ ನಡೆ. ಶಾಸಕರೇ ಈ ಕಾನೂನಿನ ಬಗ್ಗೆ ನಿರ್ಧರಿಸಲಿದ್ದಾರೆ. ಆದರೆ, ಕೇಂದ್ರ ಸರಕಾರವು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಇದರ ಕುರಿತು ಚರ್ಚಿಸಲು ಏಕೆ ಅವಕಾಶ ನೀಡಿಲ್ಲ. ಇದು ಜನಪರ ಕಾನೂನಾಗಿದ್ದರೆ ಚರ್ಚೆಗೆ ಹೆದರುವಂಥ ಕಾರಣ ಏನಿತ್ತು. ಚರ್ಚೆ ನಡೆದಿದ್ದರೆ, ಕಾನೂನುಗಳ ಬಗ್ಗೆ ದೇಶದ ಜನತೆಯೇ ನಿರ್ಧರಿಸುತ್ತಿದ್ದರು’ ಎಂದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು