ಬೆಂಗಳೂರು(12/11/2020): ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅವರಿಗಾಗಿ ಅವರ ಪೋಷಕರು ಕಾರನ್ನೇ ಮಾರಾಟಕ್ಕಿಟ್ಟಿದ್ದಾರೆ.
ಸದ್ಯ ರಾಗಿಣಿ ದ್ವಿವೇದಿ ಜೈಲಿನಲ್ಲಿದ್ದು, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ರಾಗಿಣಿ ದ್ವಿವೇದಿಯವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಅವರ ಹೆತ್ತವರು ಈ ಹಿಂದೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಎರಡು ಕೋಟಿ ಮೌಲ್ಯದ ಪ್ಲಾಟನ್ನು ಮಾರಾಟಕ್ಕಿಟ್ಟಿದ್ದರು. ದುರಾದೃಷ್ಟವಶಾತ್ ಪ್ಲಾಟ್ ಮಾರಾಟಗೊಂಡಿರಲಿಲ್ಲ. ಆದ್ದರಿಂದ ಇದೀಗ ತಮ್ಮ ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಈ ಬಗ್ಗೆ ಆಯ್ದ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಮೆಸೇಜ್ ಹರಿಯಬಿಟ್ಟಿದ್ದಾರೆ.