ಹೋಮ್ ಕ್ವಾರೈಂಟೈನ್ ಅವಧಿಯನ್ನು ಚಿಕಿತ್ಸಾ ಅವಧಿಯೆಂದು ಪರಿಗಣಿಸಲಾಗುವುದಿಲ್ಲ : ಒಮನ್ ಆರೋಗ್ಯ ಸಚಿವ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಸ್ಕತ್(13-11-2020): ಒಮನಿಗೆ ಮರಳಿ ಬಂದ ನಂತರದ ಹೋಮ್ ಕ್ವಾರೈಂಟೈನ್ ಅವಧಿಯನ್ನು ಚಿಕಿತ್ಸಾ ಅವಧಿಯೆಂದು ಪರಿಗಣಿಸಲಾಗದು. ಹೋಮ್ ಕ್ವಾರೈಂಟೈನ ಸಮಯವನ್ನು ರಜೆಯ ಅವಧಿಯಿಂದಲೇ ವಿನಿಯೋಗಿಸಬೇಕೆಂದು ಒಮನ್ ಆರೋಗ್ಯ ಸಚಿವ ಅಹ್ಮದ್ ಅಲ್ ಸಯೀದ್ ತಿಳಿಸಿದ್ದಾರೆ.

ಒಮನಿಗೆ ಹೊರಡುವ ತೊಂಭತ್ತಾರು ಗಂಟೆಗಳ ಮೊದಲು ನಡೆಸಿದ ಕೊರೋನಾ ಪರೀಕ್ಷಾ ಫಲಿತಾಂಶದ ಪ್ರಮಾಣ ಪತ್ರವನ್ನು ಪ್ರಯಾಣದ ಸಮಯದಲ್ಲಿ ಜೊತೆಗೆ ತರಬೇಕೆಂದೂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ನೆಗೆಟಿವ್ ಬಂದರೆ, ಏಳು ದಿನಗಳ ಕ್ವಾರೈಂಟೈನ್ ಇರುತ್ತದೆ. ಕ್ವಾರೈಂಟೈನ್ ಮುಗಿದ ಬಳಿಕ, ಮತ್ತೊಮ್ಮೆ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರನೇ ಸಲದ ಕೊರೋನಾ ಪರೀಕ್ಷೆಗೆ ಒಳಗಾಗಲು ಇಚ್ಛಿಸದೇ ಇದ್ದವರು ಹದಿನಾಲ್ಕು ದಿನಗಳ ಕ್ವಾರೈಂಟೈನಿಗೆ ಒಳಗಾಗಬೇಕಾಗುತ್ತದೆ ಎಂದೂ ಅವರು ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು