ಇಸ್ತಾಂಬುಲ್(30/10/2020): ಟರ್ಕಿಯಲ್ಲಿ ಇಂದು ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 6 ಜನರು ಮೃತಪಟ್ಟಿದ್ದಾರೆ, 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಈ ಭೂಕಂಪನ ಸಂಭವಿಸಿದ್ದು, ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದ ಹಲವಾರು ಕಟ್ಟಡಗಳು ನೆಲಕ್ಕುರುಳಿವೆ.
‘ಇಜ್ಮಿರ್ನಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. 120 ಮಂದಿ ಗಾಯಗೊಂಡಿದ್ದಾರೆ. 38 ಆಂಬುಲೆನ್ಸ್ಗಳು, ಎರಡು ಹೆಲಿಕಾಪ್ಟರ್ಗಳು ಆಂಬ್ಯುಲೆನ್ಸ್ ಮತ್ತು 35 ವೈದ್ಯಕೀಯ ರಕ್ಷಣಾ ತಂಡಗಳು ಇಜ್ಮೀರ್ನಲ್ಲಿ ಕಾರ್ಯನಿರ್ವಹಿಸುತ್ತಿವೆ,’ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಟ್ವೀಟ್ ಮಾಡಿದ್ದಾರೆ.