ಕತರಿನಲ್ಲಿ ನಿರ್ಮಾಣವಾಲಿದೆ ಬೃಹತ್ ಸೋಲಾರ್ ಪ್ಲಾಂಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹ-ಕತರ್(4-11-2020): ಕತರಿನಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗುವುದೆಂದು ವರದಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಗತ್ತಿನ ಅತಿದೊಡ್ಡ ಸೋಲಾರ್ ಟ್ರಾಕಿಂಗ್ ವ್ಯವಸ್ಥೆಯನ್ನು ಬಳಸಿ ಇದನ್ನು ಜಾರಿಗೆ ನಿರ್ಮಾಣ ಮಾಡಲಾಗುವುದೆಂದು ಮೂಲಗಳು ತಿಳಿಸಿವೆ.

ಅಂತರರಾಷ್ಟ್ರೀಯ ಸೋಲಾರ್ ಕಂಪೆನಿಯಾದ ‘ಐಟಿ ಮ್ಯಾಟಕ್’ ಈ ಪ್ಲಾಂಟ್ ಸ್ಥಾಪಿಸುವ ಹೊಣೆ ವಹಿಸಿಕೊಂಡಿದೆ. ದೇಶದ ಅಗತ್ಯದ ಹತ್ತು ಶೇಕಡಾ ವಿದ್ಯುತ್ ಉತ್ಪಾದನೆಯನ್ನು ಈ ಸೋಲಾರ್ ಪ್ಲಾಂಟ್ ಮೂಲಕ ಸಾಧಿಸುವ ಗುರಿಯನ್ನು ಇರಿಸಲಾಗಿದೆ. 800 ಮೆಗಾ ವ್ಯಾಟ್ ವಿದ್ಯುತ್ತನ್ನು ಐಟಿ ಮ್ಯಾಟಕ್’ ಕತರಿಗೆ ನೀಡಲಿದೆ. ರಾಜಧಾನಿಯಿಂದ ಎಂಭತ್ತು ಕಿಲೋ ಮೀಟರ್ ದೂರದ ಅಲ್-ಕರ್ಸಾಹ್ ಎಂಬಲ್ಲಿ ಈ ಪ್ಲಾಂಟ್ ನಿರ್ಮಾಣವಾಗಲಿರುವುದು.

1000 ಹೆಕ್ಟೇರ್ ಜಮೀನಿನಲ್ಲಿ ಸ್ಥಾಪಿಸಲಾಗುವ ಇದು  ಆರಂಭದಲ್ಲಿ 350 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ತೊಡಗಿದರೆ, 2022 ರ ಎಪ್ರಿಲ್ ತಿಂಗಳಾಗುವಾಗ ಅದು 800 ಮೆಗಾ ವ್ಯಾಟಿಗೆ ಏರಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು