BIG BREAKING NEWS ಕತರ್ ವಿರುದ್ಧ ಹೇರಲಾಗಿದ್ದ ದಿಗ್ಭಂಧನ ತೆರವುಗೊಳಿಸಿದ ಸೌದಿ ಅರೇಬಿಯಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್(4-1-2021): ಕತರ್ ವಿರುದ್ಧ ಹೇರಲಾಗಿದ್ದ ದಿಗ್ಭಂಧನವನ್ನು ತೆರವುಗೊಳಿಸಲು ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದೆ. ಈ ಮೂಲಕ ವರ್ಷಗಳಿಂದ ಕತರ್ ಮತ್ತು ಸೌದಿ ನಡುವೆ ಸ್ಥಗಿತಗೊಂಡಿದ್ದ ಭೂ, ವಾಯು, ನೌಕಾ ಸಂಚಾರಗಳು ಮತ್ತೆ ಚಾಲನೆಗೊಂಡಿದೆ.

ಕುವೈತ್ ವಿದೇಶಾಂಗ ಇಲಾಖೆಯು ಈ ವಿಚಾರವನ್ನು ಪ್ರಕಟಿಸಿದ್ದು, ಸೌದಿ ಮಿತ್ರಪಕ್ಷಗಳು ಮತ್ತು ಕತರ್ ನಡುವಿನ ವಿವಾದಗಳನ್ನು ಪರಿಹರಿಸಲು ಆರಂಭದಿಂದಲೂ ಕುವೈತ್ ನಡೆಸುತ್ತಿದ್ದ ಅವಿರತ ಪ್ರಯತ್ನಗಳು ಈ ಮೂಲಕ ಸಫಲವಾದಂತಾಗಿದೆ.

ಇರಾನ್ ಜೊತೆಗಿನ ಸಂಬಂಧ ಮತ್ತಿತರ ಆರೋಪಗಳನ್ನು ಹೊರಿಸಿ, ಸೌದಿ, ಯುಎಇ, ಬಹ್ರೈನ್ ಮತ್ತು ಈಜಿಪ್ಟ್ ದೇಶಗಳು 2017 ರ ಜೂನ್ ಐದರಂದು ಕತರ್ ಜೊತೆಗಿನ ಎಲ್ಲಾ ಸಂಬಂಧಗಳನ್ನು ಏಕಾಏಕಿ ಕಡಿದು ಹಾಕಿದ್ದವು. ಪರ್ಯಾಯ ದ್ವೀಪವಾದ ಕತರಿನ ಏಕೈಕ ಭೂ ಗಡಿ ಸೇರಿದಂತೆ ವಾಯು, ನೌಕಾಯಾನವನ್ನೂ ನಿರ್ಬಂಧಿಸಿದ್ದವು.

ದಿಗ್ಬಂಧನವನ್ನು ತೆರವುಗೊಳಿಸಲು ಅಲ್ ಜಝೀರ ಚಾನಲನ್ನು ಬಂದ್ ಮಾಡುವುದು, ಕತರಿನಲ್ಲಿರುವ ತುರ್ಕಿ ಸೇನೆಯನ್ನು ತೆರವುಗೊಳಿಸುವುದು, ಇರಾನ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವುದು ಸೇರಿದಂತೆ ಕತರಿನ ಮುಂದೆ ಹಲವು ಕಠಿಣ ಶರತ್ತುಗಳನ್ನು ವಿಧಿಸಿದ್ದವು. ಕತರ್ ಇವುಗಳನ್ನು ತಿರಸ್ಕರಿಸಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು