ಇಸ್ತಾಂಬುಲ್(7-11-2020): ಕತರ್-ತುರ್ಕಿ ಉನ್ನತ ಕಾರ್ಯಕಾರಿಸಮಿತಿಯ ಆರನೆಯ ಅಧಿವೇಶನ ತುರ್ಕಿಯ ಇಸ್ತಾಂಬುಲಿನಲ್ಲಿ ಆರಂಭವಾಯಿತು. ಇದರಲ್ಲಿ ಕತರ್ ಮತ್ತು ತುರ್ಕಿ ದೇಶಗಳ ಉನ್ನತ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಭಾಗವಹಿಸುತ್ತಾರೆ.
ಕತರ್ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೈಖ್ ಮುಹಮ್ಮದ್ ಅಬ್ದುಲ್ ರಹಿಮಾನ್ ಅಲ್-ತಾನಿ ಮತ್ತು ತುರ್ಕಿ ವಿದೇಶಾಂಗ ಸಚಿವ ಮೆವ್ಲುಟ್ ಕೌಸೋಗ್ಲು ಕೂಡ ಈ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಸುರಕ್ಷತೆ, ಜಾಗತಿಕ ಶಾಂತಿ, ಸ್ಥಿರತೆ, ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಪರಸ್ಪರ ಸಹಕಾರ ಮತ್ತು ಬಿಕ್ಕಟ್ಟುಗಳ ಶಾಂತಿಯುತ ಪರಿಹಾರ ಇತ್ಯಾದಿಗಳ ಕುರಿತಾಗಿ ಚರ್ಚೆ ನಡೆಯಲಿದೆ.
2014ರಲ್ಲಿ ಈ ಉನ್ನತ ಸಮಿತಿಯ ರಚನೆಗೊಂಡಿದ್ದು, ಕತರ್-ತುರ್ಕಿ ಬಾಂಧವ್ಯದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕತರ್ ಮತ್ತು ತುರ್ಕಿ ವಾಣಿಜ್ಯ, ವ್ಯವಹಾರ, ರಕ್ಷಣೆ ಮತ್ತಿತರ ವಿಚಾರಗಳಲ್ಲಿ ಪರಸ್ಪರ ಹೆಚ್ಚು ನಿಕಟವಾಗುತ್ತಿವೆ.