ಕತರಿಗೆ ಹಿಂದಿರುಗಿ ಬರುವವರ ವಿಚಾರ | ಈಗ ಇರುವ ಕೊರೋನಾ ನಿಯಮಾವಳಿಗಳನ್ನೇ ಮುಂದುವರಿಸಲು ತೀರ್ಮಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ(23-10-2020): ಕತರಿಗೆ ಹಿಂದಿರುಗಿ ಬರುವವರ ವಿಚಾರದಲ್ಲಿ ಈಗ ಇರುವ ಕೊರೋನಾ ನಿಯಮಾವಳಿಗಳನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ. ಕತರಿಗೆ ಹಿಂದಿರುಗುವ ಮೊದಲು ‘ಕತರ್ ಪೋರ್ಟಲ್’ ಮೂಲಕ “ಎಕ್ಸೆಪ್ಶನಲ್ ರಿ ಎಂಟ್ರಿ ಪರ್ಮಿಟ್” ಪಡೆದಿರಬೇಕೆಂಬ ನಿಯಮದಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ಸಾರ್ವಜನಿಕ ಆರೋಗ್ಯ ಇಲಾಖೆಯು ತಿಳಿಸಿದೆ.

ಕತರಿ ಪೌರರಿಗೆ ಮತ್ತು ಕತರಿನ ರೆಸಿಡೆನ್ಸಿ ವೀಸಾ ಹೊಂದಿರುವವರಿಗೆ ದೇಶದೊಳಗೆ ಬರುವ ಮತ್ತು ಹೋಗುವ ವಿಚಾರಗಳಲ್ಲಿ ಕೆಲವು ಸಣ್ಣಪುಟ್ಟ ವ್ಯತ್ಯಾಸಗಳನ್ನಷ್ಟೇ ಮಾಡಲಾಗಿದೆ. ಇದರ ಪ್ರಕಾರ, ಹೆತ್ತವರು ಜೊತೆಗಿರದೇ ಒಬ್ಬಂಟಿಯಾಗಿ ಪ್ರಯಾಣ ಬೆಳೆಸುವ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೋಮ್ ಕ್ವಾರಂಟೈನ್ ಮಾಡಿದರೆ ಸಾಕಾಗುತ್ತದೆ.

ಪ್ರಜೆಗಳಿಗೂ ಮತ್ತು ರೆಸಿಡೆನ್ಸಿ ವೀಸಾ ಹೊಂದಿರುವ ವಿದೇಶಿಯರಿಗೂ ಯಾವಾಗ ಬೇಕಾದರೂ ವಿದೇಶೀ ಯಾತ್ರೆ ಕೈಗೊಳ್ಳಬಹುದಾಗಿದೆ. ಹಾಗೆ ಹೊರಡಲಿರುವ ದೇಶಗಳ ಕ್ವಾರೈಂಟೈನ್ ನಿಯಮಗಳು, ಅಲ್ಲಿ ತಂಗುವ ಅವಧಿ, ಕೋರೋನಾ ನೆಗೆಟಿವ್ ಪ್ರಮಾಣ ಪತ್ರ ಇತ್ಯಾದಿಗಳ ಕುರಿತು ಸ್ಪಷ್ಟವಾಗಿ ಅರಿತಿರಬೇಕು.

ಉದ್ಯೋಗಿಗಳು ಮತ್ತು ಉದ್ಯೋಗದಾತರು ಪ್ರಯಾಣಕ್ಕೆ ಮೊದಲೇ ಪರಸ್ಪರ ಸಂವಹನ ನಡೆಸಿ, ಕತರಿಗೆ ಹಿಂದಿರುಗುವ ಸಮಯ, ಪ್ರಯಾಣದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬೇಕು.

ಭಾರತದಂತಹಾ ಕೊರೋನಾ ತೀವ್ರವಾಗಿ ಹರಡಿರುವ ದೇಶಗಳಿಂದ ಮತ್ತು ಕತರಿನಿಂದ ಅಂಗೀಕೃತಗೊಂಡ ‘ಕೊರೋನಾ ಪರೀಕ್ಷಾ ಕೇಂದ್ರ’ಗಳಿರದ ದೇಶಗಳಿಂದ ಬಂದವರು ಒಂದು ವಾರ ಹೋಟೆಲ್ ಕ್ವಾರೈಂಟೈನಲ್ಲಿರುವುದು ಕಡ್ಡಾಯವಾಗಿದೆ. ಇದಕ್ಕೆ ತಗುಲುವ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ. “ಡಿಸ್ಕವರಿ ಕತರ್” ವೆಬ್‌ಸೈಟ್ ಮೂಲಕ ಮಾತ್ರವೇ ಹೋಟೆಲ್ ಬುಕ್ಕಿಂಗಿಗೆ ಅನುಮತಿಯಿರುವುದು.

ಹೋಟೆಲ್ ಕ್ವಾರೈಂಟೈನಿನ ಆರನೇಯ ದಿನದಂದು ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಆಗ ನೆಗೆಟಿವ್ ಬಂದರೆ, ಏಳನೆಯ ದಿನ ಮನೆಗೆ ಹೋಗಿ ಇನ್ನೂ ಒಂದು ವಾರ ‘ಹೋಮ್ ಕ್ವಾರೈಂಟೈನಿ’ಗೆ ಒಳಗಾಗಬೇಕು. ಹೀಗೆ ‘ಹೋಮ್ ಕ್ವಾರೈಂಟೈನಿ’ಗೆ ಒಳಪಟ್ಟ ಸಮಯದಲ್ಲಿ ” ಇಹ್ತಿರಾಝ್” ಆ್ಯಪ್ ಹಳದಿ ಬಣ್ಣವನ್ನು ತೋರಿಸುವುದು.

ಕತರಿನಿಂದ ಅಂಗೀಕೃತಗೊಂಡ ‘ಕೊರೋನಾ ಪರೀಕ್ಷಾ ಕೇಂದ್ರಗಳು’ ಕಾರ್ಯನಿರ್ವಹಿಸುವ ದೇಶಗಳಿಂದ ಬರುವವರಿಗೆ, ಕತರಿಗೆ ಪ್ರಯಾಣ ಮಾಡುವ 48 ಗಂಟೆಯ ಮೊದಲು ಮಾಡಿದ ಕೊರೋನಾ ಪರೀಕ್ಷೆಯ ಫಲಿತಾಂಶ ಕೈಯ್ಯಲ್ಲಿದ್ದರೆ ಕತರಿನ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ಮಾಡಬೇಕಾದ ಅಗತ್ಯವಿಲ್ಲ. ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಅಂಗೀಕಾರ ಪಡೆದ ‘ಕೊರೋನಾ ಪರೀಕ್ಷಾ ಕೇಂದ್ರ’ಗಳಿರುವ ದೇಶಗಳ ಪಟ್ಟಿ ಇಲಾಖೆಯ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ.

ಕತರ್ ಏರ್‌ವೇಸ್ ಅಲ್ಲದ ವಿಮಾನಗಳ ಮೂಲಕ ಬರುವವರಿಗೆ ಕೊರೋನಾ ಪರೀಕ್ಷೆಯ ಫಲಿತಾಂಶ ಇಲ್ಲದೇ ಪ್ರಯಾಣಿಸಲು ಅನುಮತಿಯಿದೆ. ಕೊರೋನಾ ಪ್ರಕರಣಗಳು ಕಡಿಮೆಯಿರುವ ದೇಶಗಳಿಂದ ಬರುವವರಿಗೆ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಅಂಥವರು ಒಂದು ವಾರ ಕಾಲ ಕಟ್ಟುನಿಟ್ಟಾಗಿ ಹೋಮ್ ಕ್ವಾರೈಂಟೈನ್”ಗೆ ಒಳಗಾಗುವೆನೆಂಬ ಮುಂಗಡ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು