ದೋಹಾ-ಕತರ್(4-11-2020): ಕತರಿನಲ್ಲಿ ಚೆಕ್ ಬೌನ್ಸ್ ಆಗುವ ಪ್ರಕರಣಗಳಿಗೆ ನಿಯಂತ್ರಣ ತರುವ ಸಲುವಾಗಿ ಇನ್ನು ಮುಂದೆ ಇಲೆಕ್ಟ್ರಾನಿಕ್ ಚೆಕ್ಕುಗಳು ಚಾಲ್ತಿಗೆ ಬರಲಿದೆಯೆನ್ನಲಾಗಿದೆ.
ಕಾಗದದ ಚೆಕ್ಕುಗಳ ಬದಲು ಇಲೆಕ್ಟ್ರಾನಿಕ್ ಚೆಕ್ ವ್ಯವಹಾರವು ಜಾರಿಯಾದರೆ, ಚೆಕ್ಕು ಸಂಬಂಧಿತ ಅಪರಾಧ ಪ್ರಕರಣಗಳಿಗೆ ತಡೆಯಾಗುವುದಾಗಿ ಕತರ್ ಸೆಂಟ್ರಲ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪೂರ್ವ ವ್ಯವಹಾರಗಳನ್ನು ಪರಿಶೀಲಿಸಿದ ಬಳಿಕವೇ ಹೊಸ ಚೆಕ್ಕುಗಳನ್ನು ಪಡೆಯಲು ಅನುಮತಿ ನೀಡುವುದಾಗಿ ಸೆಂಟ್ರಲ್ ಬ್ಯಾಂಕ್ ಮೊನ್ನೆಯಷ್ಟೇ ಸುತ್ತೋಲೆ ಹೊರಡಿಸಿತ್ತು.