ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಕತರ್ ಉತ್ಸುಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ(6-11-2020): ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಸಿದ್ಧವಾಗುತ್ತಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕತರಿನ ಉನ್ನತ ರಾಜತಾಂತ್ರಿಕರ ಜೊತೆಗೆ ಶೀಘ್ರದಲ್ಲೇ ಭಾರತದ ಪ್ರಧಾನ ಮಂತ್ರಿ ಚರ್ಚಿಸಲಿರುವರು.

ಭಾರತಕ್ಕೆ ವಿದೇಶೀ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನವಾಗಿ ಪ್ರಧಾನ ಮಂತ್ರಿಗಳು ಕತರ್ ಸೇರಿದಂತೆ ವಿವಿಧ ದೇಶಗಳ ರಾಜತಾಂತ್ರಿಕರ ಜೊತೆಗೆ ಸತತ ಮಾತುಕತೆ ನಡಸುತ್ತಾ ಬಂದಿದ್ದಾರೆ. ಕತರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಮೂಲಕ ಭಾರತದಲ್ಲಿ ಹೂಡಿಕೆ ಮಾಡುವ ಕುರಿತ ಯೋಜನೆಗಳು ಕಾರ್ಯಗತಗೊಳ್ಳುವುದು.

ಕೊರೋನಾ ಸಂದಿಗ್ಧತೆಯ ನಂತರದ ದಿನಗಳಲ್ಲಿ ಭಾರತದ ಅರ್ಥ ವ್ಯವಸ್ಥೆಯು ಕ್ಷಿಪ್ರಗತಿಯಲ್ಲಿ ಚೇತರಿಸಿಕೊಳ್ಳಲಿದೆಯೆಂದು ನಂಬಲಾಗಿದೆ. ಈಗಾಗಲೇ ಆಧಾನಿ ಒಡೆತನದ ವಿದ್ಯುತ್ ಕಂಪೆನಿಯೂ ಸೇರಿದಂತೆ ಹಲವು ಭಾರತೀಯ ಉದ್ಯಮಗಳಲ್ಲಿ ಕತರ್ ಇನ್ವೆಸ್ಟ್ಮೆಂಟ್ ಅಥಾರಿಟಿ ಹೂಡಿಕೆ ಮಾಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು