ಕತರ್: ನಾಳೆಯಿಂದ ಕಠಿಣ ಕೋವಿಡ್ ನಿಯಮಾವಳಿಗಳು ಜಾರಿ | ನಿಯಮಾವಳಿಗಳು ಯಾವುದೆಲ್ಲಾ ಎನ್ನುವುದು ಇಲ್ಲಿದೆ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹ: ಕತರಿನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣಗೊಳಿಸಲಾದ  ನಿಯಮಾವಳಿಗಳು ನಾಳೆಯಿಂದ (ಮಾರ್ಚ್ 26 ಶುಕ್ರವಾರದಿಂದ) ಜಾರಿಗೊಳ್ಳಲಿದೆ.

👉 ರೆಸ್ಟೋರೆಂಟುಗಳು ಮತ್ತು ಕೆಫೆಗಳು ಭಾಗಶಃ ಅಂದರೆ (ಹದಿನೈದು ಶೇಕಡಾ) ಕಾರ್ಯನಿರ್ವಹಣೆ ಮಾಡಬಹುದಾಗಿದೆ. “ಕ್ಲೀನ್ ಕತರ್ಪ್ರಮಾಣ ಪತ್ರಗಳನ್ನು ಹೊಂದಿರುವ ರೆಸ್ಟೋರೆಂಟುಗಳು ಮತ್ತು ಕೆಫೆಗಳು ಐವತ್ತು ಶೇಕಡಾ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು. ತೆರೆದ ಜಾಗಗಳಲ್ಲಿರುವವುಗಳು ಮೂವತ್ತು ಶೇಕಡಾ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಬಹುದು.

👉 ಮನೆಗಳಲ್ಲಿ, ಮಜ್ಲಿಸುಗಳಲ್ಲಿ(ಕುಳಿತು ಮಾತನಾಡುವ ಕೋಣೆ), ಮುಚ್ಚಿದ ಕೋಣೆಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ತೆರೆದ ಸ್ಥಳಗಳಲ್ಲಿ ಐದು ಜನರಷ್ಟೇ ಗುಂಪುಗೂಡಬಹುದಾಗಿದೆ. ಒಂದೇ ಮನೆಯಲ್ಲಿ ವಾಸಿಸುತ್ತಿರುವವರಿಗಷ್ಟೇ ಚಳಿಗಾಲದ ಡೇರೆಗಳಲ್ಲಿ ವಾಸಿಸಲು ಅವಕಾಶವಿರುವುದು. ಮುಂದಿನ ಮಾರ್ಗಸೂಚಿಗಳು ಹೊರಡಿಸುವ ವರೆಗೆ ಮುಚ್ಚಿದ ಯಾ ತೆರೆದ ಸ್ಥಳಗಳಲ್ಲಿ ವೈವಾಹಿಕ ಸಮಾರಂಭವನ್ನು ನಿಷೇಧಿಸಲಾಗಿದೆ.

👉 ಪಾರ್ಕುಗಳಲ್ಲಿ, ಬೀಚುಗಳಲ್ಲಿ, ಕ್ರೀಡಾಂಗಣಗಳಲ್ಲಿ ಒಂದೇ ಮನೆಯಲ್ಲಿ ವಾಸಿಸುವವರಗೆ ಅಥವಾ ಗರಿಷ್ಠ ಎರಡು ಮಂದಿಗಷ್ಟೇ ಒಟ್ಟುಗೂಡಬಹುದಾಗಿದೆ.

👉 ವಾಣಿಜ್ಯ ಮಳಿಗೆಗಳು ಮೂವತ್ತು ಶೇಕಡಾ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ. ಹನ್ನೆರಡು ವರ್ಷಕ್ಕಿಂತ ಕಡಿಮೆಯಿರುವ ಮಕ್ಕಳಿಗೆ ಇಲ್ಲಿ ಪ್ರವೇಶವಿರುವುದಿಲ್ಲ. ಬ್ಯೂಟಿ ಪಾರ್ಲರ್ ಮತ್ತು ಸೆಲೂನುಗಳು ಕೂಡಾ ಮೂವತ್ತು ಶೇಕಡಾ ಕಾರ್ಯಾಚರಣೆ ಮಾಡಬಹುದು. ಮನರಂಜನಾ ಕೇಂದ್ರಗಳು ಮುಂದಿನ ಮಾರ್ಗಸೂಚಿಗಳು ಬರುವವರಗೆ ಮುಚ್ಚುಗಡೆಗೆ ಆದೇಶಿಸಲಾಗಿದೆ.

👉 ಆರೋಗ್ಯ ಕ್ಲಬ್ಬುಗಳು, ದೈಹಿಕ ಕಸರತ್ತು ಕೇಂದ್ರಗಳು, ಮಸಾಜ್ ಸೆಂಟರುಗಳು ಮುಂದಿನ ಆದೇಶ ಬರುವವರೆಗೂ ಮುಚ್ಚಲಾಗುವುದು. ಹೊಟೇಲುಗಳಲ್ಲಿರುವ ಜಿಮ್ ಮಾಡಲು ಅತಿಥಿಗಳಿಗೆ ರಿಯಾಯಿತಿಯಿದೆ. ಈಜುಕೊಳಗಳು, ವಾಟರ್ಪಾರ್ಕುಗಳು ಮುಂದಿನ ಸೂಚನೆ ಬರುವವರೆಗೆ ಮುಚ್ಚಲಾಗುವುದು.

👉 ಖಾಸಗೀ ಆಸ್ಪತ್ರೆಗಳು ಎಪ್ಪತ್ತು ಶೇಕಡಾ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಬಹುದಾಗಿದೆ. ಸ್ವಚ್ಛಗೊಳಿಸುವ ಮತ್ತು ಹಾಸ್ಪಿಟಾಲಿಟಿ ಸೇವೆಗಳ ಸಮಯ ಮಿತಿಯು ಮೂವತ್ತು ಶೇಕಡಾಗೆ ಇಳಿಸಲಾಗಿದೆ.

👉 ಬಾಡಿಗೆ ದೋಣಿಗಳು, ಪ್ಲೀಸರ್ ದೋಣಿಗಳು ಮೊದಲಾದುವುಗಳ ಕೆಲಸಕಾರ್ಯಗಳು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಒಂದೇ ಮನೆಯಲ್ಲಿ ವಾಸಿಸುತ್ತಿರುವವರು ಒಟ್ಟಾಗಿ ಪ್ರಯಾಣಿಸಲು ರಿಯಾಯಿತಿ ಇದೆ. ಪ್ರಯಾಣಿಕರು ಒಂದೇ ಮನೆಯಲ್ಲಿ ವಾಸಿಸುತ್ತಿರುವವರು ಎಂದು ದೋಣಿ ಮಾಲಕ ಖಚಿತ ಪಡಿಸಿಕೊಳ್ಳುವುದು ಅಗತ್ಯವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು