ಕತರ್ ಜೊತೆಗಿನ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಹುಡುಕುತ್ತಿರುವುದಾಗಿ ಸೌದಿ ಅರೇಬಿಯಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿದ್ದಾ(22-11-2020): ಕಳೆದ ಮೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಕತರಿನೊಂದಿಗಿನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಹುಡುಕುತ್ತಿರುವುದಾಗಿ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್ ಸ‌ಊದ್ ಹೇಳಿದರು. ಅದೇ ವೇಳೆ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚಿನ ಚರ್ಚೆ ನಡೆಸಬೇಕಾದ ಅಗತ್ಯವಿದೆಯೆಂದು ಅವರು ತಿಳಿಸಿದರು.

ನಾವು ನಮ್ಮ ಕತರಿ ಸಹೋದರರೊಂದಿಗೆ ಸೇರಿಕೊಳ್ಳಲು ಬಯಸುತ್ತಿದ್ದೇವೆ ಎಂದ ಅವರು ಕತರ್ ಕೂಡಾ ಈ ವಿಚಾರಕ್ಕೆ ಬದ್ಧವಾಗಿದೆಯೆಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಜಿ-20 ಶೃಂಗ ಸಭೆಯ ಅಂಗವಾಗಿ ನಡೆಯುತ್ತಿದ್ದ ಆನ್ಲೈನ್ ಸಭೆಯಲ್ಲಿ ಮಾತನಾಡುತ್ತಿದ್ದ ಫೈಸಲ್, ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿರುವ ಸವಾಲುಗಳನ್ನು ಪರಿಹರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದರು.

ಕೊಲ್ಲಿ ದೇಶಗಳ ನಡುವಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾದರೆ ಅದು ಎಲ್ಲರ ವಿಜಯವಾಗಿದೆಯೆಂದೂ, ಯಾವಾಗ ಬೇಕಾದರೂ ಇದಕ್ಕೆ ಪರಿಹಾರ ಸಿಗಲಿದೆಯೆಂಬ ವಿಶ್ವಾಸವಿದೆಯೆಂದೂ ಕತರ್ ಉಪಪ್ರಧಾನಿಯೂ, ವಿದೇಶಾಂಗ ಸಚಿವರೂ ಅದ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ರಹಿಮಾನ್ ಅವರ ಇತ್ತೀಚೆಗಿನ ಹೇಳಿಕೆ ಕೂಡಾ ಇಲ್ಲಿ ಗಮನಾರ್ಹ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು