ಕತರಿನಲ್ಲಿ ಇಂದಿನಿಂದ ಸಾಂಕ್ರಾಮಿಕ ರೋಗ ನಿರೋಧಕ ಚುಚ್ಚುಮದ್ದು

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ(19-10-2020): ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ನಿಗಮ ಜಂಟಿಯಾಗಿ ಚುಚ್ಚುಮದ್ದು ನೀಡುವ ಅಭಿಯಾನ ಆಯೋಜಿಸಿದೆ. ಇಂದಿನಿಂದ ಆರಂಭಗೊಳ್ಳುವ ಈ ಅಭಿಯಾನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಚುಚ್ಚುಮದ್ದು ನೀಡಲಾಗುತ್ತದೆ.

ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ನಲುವತ್ತು ಅರೆಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಇದು ಲಭ್ಯವಿದೆ. ಆರು ತಿಂಗಳ ಪ್ರಾಯದಿಂದ ತೊಡಗಿ ಎಲ್ಲಾ ವಯಸ್ಕರಿಗೂ ಈ ಚುಚ್ಚುಮದ್ದು ಸುರಕ್ಷಿತವಾಗಿದೆ. 2021 ರ ಮಾರ್ಚ್ ತಿಂಗಳವರೆಗೂ ಮುಂದುವರಿಯುವ ಈ ಅಭಿಯಾನದಲ್ಲಿ ಸುಮಾರು ಐದು ಲಕ್ಷಕ್ಕೂ ಮಿಕ್ಕ ಮಂದಿಗೆ ಚುಚ್ಚುಮದ್ದು ನೀಡುವ ಗುರಿಯಿರಿಸಲಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವರ್ಷದ ಅಭಿಯಾನ ಹೆಚ್ಚು ಪ್ರಸ್ತುತವಾಗಿದೆ ಎಂದು ಕೊರೋನಾ ಪ್ರತಿರೋಧ ಸಮಿತಿ ಅಧ್ಯಕ್ಷ ಅಬ್ದುಲ್ಲತೀಫ್ ಅಲ್ ಖಾಲ್ ಅಭಿಪ್ರಾಯ ಪಟ್ಟಿದ್ದಾರೆ. ಕೊರೋನ ಜೊತೆಗೆ ಮತ್ತಿತರ ಸಾಂಕ್ರಾಮಿಕ ರೋಗಗಳೂ ಬಾಧಿಸಿದರೆ, ಆರೋಗ್ಯ ಪರಿಸ್ಥಿತಿಯು ಮಾರಣಾಂತಿಕವಾಗಬಹುದು ಎಂದೂ ಅವರು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು