ಗಾಜಾದ ಒಂದು ಲಕ್ಷ ಕುಟುಂಬಗಳಿಗೆ ಕತರ್‌ ನಿಂದ ಧನಸಹಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ(5-11-2020): ಫೆಲಸ್ತೀನಿನ ಗಾಜಾದಲ್ಲಿ ಸಂಕಷ್ಟದಲ್ಲಿರುವ ಒಂದು ಲಕ್ಷ ಕುಟುಂಬಗಳಿಗೆ ಧನಸಹಾಯ ನೀಡುವ ಯೋಜನೆ ಕತರ್ ಆರಂಭಿಸಿದೆ. ಗಾಜಾ ಪುನರ್ನಿರ್ಮಾಣ ಕಾರ್ಯಕ್ರಮಗಳ ಮುಂದುವರಿಕೆಯಾಗಿ ಈ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ.

ಗಾಜಾದಲ್ಲಿರುವ ವಿವಿಧ ಬ್ಯಾಂಕುಗಳ ಮುಖಾಂತರ ನೀಡಲಾಗುವ ಈ ಧನಸಹಾಯವು ವಿಶೇಷವಾಗಿ ಗಾಜಾದಲ್ಲಿ ನಿರಾಶ್ರಿತ ಶಿಬಿರದಲ್ಲಿರುವವರನ್ನು ಕೇಂದ್ರೀಕರಿಸಿ ವಿತರಿಸಲಾಗುತ್ತಿದೆ. ಬುಧವಾರದಂದು ವಿತರಣೆ ಆರಂಭವಾದ ಬಳಿಕ ಬ್ಯಾಂಕುಗಳಲ್ಲಿ ಸರತಿ ಸಾಲುಗಳು ಕಂಡುಬರುತ್ತಿರುವ ದೃಶ್ಯಗಳನ್ನು ಅಂತರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸಿವೆ.

ಪ್ರತಿಯೊಬ್ಬರಿಗೂ ತಲಾ ನೂರು ಡಾಲರುಗಳಂತೆ ವಿತರಿಸಿಲಾಗುತ್ತಿದೆ. ಕತರ್ ರಾಷ್ಟ್ರೀಯ ಅಭಿವೃದ್ಧಿ ನಿಧಿಯು ಈ ಧನಸಹಾಯದ ಮೂಲವಾಗಿದೆ. ಇದರ ಜೊತೆಜೊತೆಗೆ ಗಾಜಾ ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಮೀಸಲಾಗಿರಿಸಲಾಗಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ವಿತರಿಸಲಾಗುತ್ತಿದೆ ಎಂದು ಕತರಿನ ಗಾಜಾ ಪುನರ್ನಿರ್ಮಾಣ ಕಮಿಟಿ ಚಯರ್‌ಮ್ಯಾನ್ ಮುಹಮ್ಮದ್ ಅಲ್ ಇಮಾದಿ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು