ಖತರ್ : ಮಾನ್ಯತೆಯುಳ್ಳ ವ್ಯಾಕ್ಸಿನುಗಳನ್ನು ಹೊರ ದೇಶಗಳಲ್ಲಿ ಪಡೆದಿದ್ದರೂ ಕ್ವಾರಂಟೈನಿನಲ್ಲಿ ರಿಯಾಯಿತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ: ಮಾನ್ಯತೆಯುಳ್ಳ ಕೋವಿಡ್ ವ್ಯಾಕ್ಸಿನುಗಳನ್ನು ಹೊರ ದೇಶಗಳಲ್ಲಿ ಪಡೆದಿದ್ದರೂ ಕ್ವಾರಂಟೈನಿನಲ್ಲಿ ರಿಯಾಯಿತಿ ಸಿಗಲಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಅಂದರೆ ಹೊರದೇಶಗಳಿಂದ ವ್ಯಾಕ್ಸಿನು ಪಡೆದು, ಕತರ್ ಪ್ರವೇಶಿಸುವವರಿಗೆ ಹೋಟೆಲ್ ಕ್ವಾರಂಟೈನಿಗೆ ಒಳಗಾಗುವ ಅಗತ್ಯವಿಲ್ಲ. ಬರೇ ಏಳು ದಿನಗಳ ಹೋಮ್ ಕ್ವಾರಂಟೈನ್ ಪಾಲಿಸಿದರೆ ಸಾಕಾಗುತ್ತದೆ.

ಆದರೆ ಇಲ್ಲಿ ಕತರ್ ಆರೋಗ್ಯ ಸಚಿವಾಲಯದ ಮಾನ್ಯತೆ ಗಳಿಸಿದ ವ್ಯಾಕ್ಸಿನುಗಳಿಗಷ್ಟೇ ರಿಯಾಯಿತಿ ಲಭ್ಯವಾಗುವುದು. ಫೈಸರ್ಬಯೋಎನ್‍ಟೆಕ್ (pfizer-biontech), ಮೋಡೆರ್ನಾ (moderna), ಒಕ್ಸ್‍ಫರ್ಡ್ಅಸ್ಟ್ರಾಝೆನಿಕಾ (Oxford-AstraZeneca) ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) –  ನಾಲ್ಕು ಕೋವಿಡ್ ವ್ಯಾಕ್ಸಿನುಗಳು ಮಾತ್ರವೇ ಮಾನ್ಯತೆ ಗಳಿಸಿರುವಂಥವುಗಳು.

ಇದರಲ್ಲಿಜಾನ್ಸನ್ ಆ್ಯಂಡ್ ಜಾನ್ಸನ್‘, ಒಂದು ಡೋಸ್ ಪಡೆದುಕೊಂಡರೂ ಸಾಕಾಗುವುದು. ಉಳಿದ ಮೂರು ವ್ಯಾಕ್ಸಿನುಗಳ ವಿಚಾರದಲ್ಲಿ ಎರಡೂ ಡೋಸುಗಳನ್ನು ಪಡೆದಿರಬೇಕಾಗುತ್ತದೆ.

ವ್ಯಾಕ್ಸಿನು ಪಡೆದಿರುವ ಬಗೆಗಿನ ನಿಖರ ದಾಖಲೆಗಳನ್ನು ಸಲ್ಲಿಸಬೇಕು. ಅದೂ ಅಲ್ಲದೇ ತಾನು ಪ್ರಯಾಣ ಆರಂಭಿಸಿದ ದೇಶದಿಂದ ಪಡೆದ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನೂ ಸಲ್ಲಿಸಬೇಕಾಗುವುದು. ಆದರೆ ಆ ಪ್ರಮಾಣ ಪತ್ರವು ಕತರಿಗೆ ಮುಟ್ಟುವ ಎಪ್ಪತ್ತೆರಡು ಗಂಟೆಗಳೊಳಗೆ ಪಡೆದಿರುವಂಥದ್ದಾಗಿರಬೇಕು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು