ಪುತ್ತೂರು(18-02-2021: ಬ್ಯಾಂಕ್ ಸಿಬ್ಬಂದಿ ಮನೆಯನ್ನು ಜಪ್ತಿ ಮಾಡಿದ್ದರಿಂದ ಮನನೊಂದು ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪುತ್ತೂರು ತಾಲೂಕಿನ ಹಾರಾಡಿ ಎಂಬಲ್ಲಿ ನಡೆದಿದೆ.
ರಘುವೀರ್ ಪ್ರಭು ಎಂಬವರ ಪತ್ನಿ ಪ್ರಾರ್ಥನಾ ಆತ್ಮಹತ್ಯೆ ಮಾಡಿಕೊಂಡವರು. ರಾಷ್ಟ್ರೀಕೃತ ಬ್ಯಾಂಕೊಂದರ ಸಿಬ್ಬಂದಿ ಮನೆ ಜಪ್ತಿ ಮಾಡಿ ಹೋಗಿದ್ದರು. ಬ್ಯಾಂಕ್ ಸಿಬ್ಬಂದಿ ಹೋದ ಬೆನ್ನಲ್ಲೇ ಪ್ರಾರ್ಥನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲ ಮರುಪಾವತಿ ಆಗಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.