ಕೋವಿಡ್ 19 ಗೆ ರಷ್ಯಾದಿಂದ ಲಸಿಕೆ; ಅಧ್ಯಕ್ಷ ಪುಟಿನ್ ಘೋಷಣೆ

putin
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಾಸ್ಕೊ(14/10/2020): ಕೋವಿಡ್–19 ವಿರುದ್ಧ ತಮ್ಮ ವಿಜ್ಞಾನಿಗಳು ಮತ್ತೊಂದು ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ  ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್  ಹೇಳಿದ್ದಾರೆ.

ಇಂದು ನಡೆದ ಸರ್ಕಾರಿ ಸಭೆಯೊಂದರಲ್ಲಿ ಈ ವಿಚಾರ ಘೋಷಿಸಿದ ಅವರು, ನಮ್ಮ ವಿಜ್ಞಾನಿಗಳು ಕೋವಿಡ್ 19 ವಿರುದ್ಧ ಸೆಣಸಾಡಬಲ್ಲ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸರಕಾರವು ಅದಕ್ಕೆ ಅನುಮೋದನೆ ನೀಡಿದೆ ಎಂದಿದ್ದಾರೆ.

ಸೈಬೀರಿಯಾದ ವೆಕ್ಟರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ಮೊದಲ ಹಂತದ ಪ್ರಯೋಗ ಕಳೆದ ತಿಂಗಳು ಕೊನೆಗೊಂಡಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಗಳು ನಡೆಯುವ ಮುನ್ನವೇ ರಷ್ಯಾವು ಆಗಸ್ಟ್‌ನಲ್ಲಿ ಕೋವಿಡ್ ಲಸಿಕೆ ‘ಸ್ಪುಟ್ನಿಕ್‌–ವಿ’ಗೆ ಅನುಮೋದನೆ ನೀಡಿತ್ತು. ಈ ನಿರ್ಧಾರಕ್ಕೆ ವಿಶ್ವಮಟ್ಟದಲ್ಲಿ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದರು.

ಮೂರು ಹಂತಗಳ ಪ್ರಯೋಗವನ್ನು ನಡೆಸದೆಯೇ ಆತುರ ತೋರಲಾಗಿದೆ ಎಂದು ರಷ್ಯೇತರ ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪುಟಿನ್  ‘ತಮ್ಮ ಮಗಳಿಗೆ ಈ ಲಸಿಕೆ ನೀಡಿದ್ದು,  ಅದು ಪರಿಣಾಮಕಾರಿಯಾಗಿದೆ’ ಎಂದು ಹೇಳಿ ವಿಜ್ಞಾನಿಗಳ ಬಾಯಿ ಮುಚ್ಚಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು