ಪುಟ್ಟ ಮಕ್ಕಳನ್ನು ಕದ್ದುಕೊಂಡು ಮಾರುತ್ತಿದ್ದ ಜಾಲ ಪತ್ತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಪುಟ್ಟ ಮಕ್ಕಳನ್ನು ಕದ್ದು ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.

ಬರೇ ಹದಿನೈದು ದಿವಸಗಳ ಪ್ರಾಯವಿರುವ ಒಂದು ಹಸುಗೂಸನ್ನು ಕದ್ದುಕೊಂಡು ಹೋಗಿದ್ದಾರೆಂಬ ದೂರು ಪೋಲೀಸರಿಗೆ ಬಂದಿತ್ತು. ಇದರ ಬೆನ್ನು ಹತ್ತಿದ ಪೋಲೀಸರಿಗೆ ಮಕ್ಕಳನ್ನು ಕದಿಯುವ ದೊಡ್ಡ ಜಾಲವೇ ಇರುವುದು ಕಂಡು ಬಂದಿದೆ.

ಫಾತಿಮಾ ಎಂಬವರ ಮನೆಯ ಒಂದು ಕೋಣೆಯನ್ನು ಬಾಡಿಗೆಗೆ ಕೇಳಿ ದಂಪತಿಯೊಂದು ಬಂದಿತ್ತು. ಕೋಣೆಯನ್ನೆಲ್ಲಾ ಪರಿಶೀಲಿಸಿದ ಬಳಿಕ, ಬಂದ ದಂಪತಿಗಳು ಯಾವುದೋ ಶರಬತ್ತನ್ನು ನೀಡಿದರು. ಇದನ್ನು ಕುಡಿದ ಫಾತಿಮಾ ಮತ್ತು ಪತಿಯು ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಪ್ರಜ್ಞೆ ಬಂದ ಬಳಿಕ ತಮ್ಮ ಹದಿನೈದು ದಿನದ ಮಗುವು ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ ಎಪ್ರಿಲ್ ಹನ್ನೆರಡರಂದು ಪೋಲೀಸರಿಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೋಲೀಸರು, ಮಗುವನ್ನು ಮಧುಬನ್ ಕಾಲೋನಿಯ ಅಗ್ನಿಹೋತ್ರಿ ಎಂಬವರ ಹತ್ತಿರ ಇರುವುದು ಪತ್ತೆ ಹಚ್ಚಿದ್ದರು.

ಅಗ್ನಿಹೋತ್ರಿಯನ್ನು ತನಿಖೆಗೊಳಪಡಿಸಿದಾಗ, ತಿಲಕ್ ನಗರದ ಅಸ್ಮಿತ್ ಖೌರ್ ಮತ್ತು ಗುರ್ಮಿತ್ ಖೌರ್ ಎಂಬವರು ಐದು ಲಕ್ಷ ರೂಪಾಯಿಗಳಿಗೆ ಮಗುವನ್ನು ತನಗೆ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡರು. ತನಿಖೆಯನ್ನು ಮುಂದುವರಿಸಿದ ಪೋಲೀಸರಿಗೆ ಮಕ್ಕಳನ್ನು ಕದ್ದು ಮಾರಾಟ ಮಾಡುವ ದೊಡ್ಡ ಜಾಲವೇ ಇರುವುದು ಪತ್ತೆಯಾಗಿದೆ.

ಮಹಿಳೆಯೊಬ್ಬರ ನೇತೃತ್ವದಲ್ಲಿ ಮಕ್ಕಳನ್ನು ಕದಿಯುವ ಗುಂಪು, ದೊಡ್ಡ ಮೊತ್ತದ ಹಣಕ್ಕೆ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿತ್ತು. ಘಟನೆ ಬೆಳಕಿಗೆ ಬಂದ ಬಳಿಕ ಅಪರಾಧಿ ಗುಂಪಿನ ಹನ್ನೊಂದು ಜನರನ್ನು ಬಂಧಿಸಲಾಗಿದೆ. ಇವರಲ್ಲಿದ್ದ ಲಕ್ಷಾಂತರ ರೂಪಾಯಿಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲೂ ಹಲವಾರು ಮಕ್ಕಳನ್ನು ಕದ್ದು ಮಾರಾಟ ಮಾಡಿರುವುದೂ ತಿಳಿದು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು