ಅನ್ನದಾತರ  ಮರಣಶಾಸನ| ಪ್ರತಿಭಟನೆಯಲ್ಲಿ ನಿರತ ರೈತ ಸಾವು

former
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(30-12-2020): ದೆಹಲಿಯ ಟಿಕ್ರಿ ಗಡಿಯಲ್ಲಿ ನಾಲ್ಕು ವಾರಗಳ ಕಾಲ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತ ಹೋರಾಡುತ್ತಲೇ ಅಂತ್ಯವನ್ನು ಕಂಡಿದ್ದಾರೆ.

ಪಂಜಾಬ್‌ನ ಮಾನ್ಸಾ ಜಿಲ್ಲೆಯ ಧರಂಪುರ ಗ್ರಾಮದ 70 ವರ್ಷದ ರೈತ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ರೈತ, ಪಿಯಾರಾ ಸಿಂಗ್, ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ಇತರ ರೈತರೊಂದಿಗೆ ಆಂದೋಲನ ನಡೆಸುತ್ತಿದ್ದರು.

ಸಿಂಗ್ ಅವರು ಅನಾರೋಗ್ಯದ ಕಾರಣ ದೆಹಲಿಯಿಂದ ಕೆಲವು ದಿನಗಳ ಹಿಂದೆ ರೈಲು ಮೂಲಕ ತಮ್ಮ ಹಳ್ಳಿಗೆ ಹಿಂತಿರುಗಿದ್ದರು. ಮಾನ್ಸಾ ಸಾಂಗ್ರೂರಿನ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಅವರ ಹಿರಿಯ ಸಹೋದರ ವಾಸಾಬಾ ಸಿಂಗ್ ಹೇಳಿದ್ದಾರೆ.

ಹಳ್ಳಿಯಲ್ಲಿ ಪ್ರತಿಭಟನೆಯಿಂದಾಗಿ ಸಾವನ್ನಪ್ಪಿದವರಲ್ಲಿ ಪಿಯಾರಾ ಸಿಂಗ್ ಮೊದಲಿಗರು ಎಂದು ಹೇಳಿದ ಗುರ್ತೇಜ್, ಅವರು ಗ್ರಾಮ ಗುರುದ್ವಾರದಲ್ಲಿ ಮುಖ್ಯ ಸೇವದಾರ್ ಆಗಿದ್ದರು ಮತ್ತು ಬೆಳಿಗ್ಗೆ 4 ಗಂಟೆಗೆ ದೇಗುಲದ ಧ್ವನಿವರ್ಧಕದ ಮೂಲಕ ಕರೆ ನೀಡುತ್ತಿದ್ದರು.

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದ ನಂತರ, ಅವರು ಪ್ರತಿಭಟನಾಕಾರರಿಗೆ ದೇಣಿಗೆ ಮತ್ತು ಪಡಿತರವನ್ನು ಕೋರಿ ಪ್ರಕಟಣೆಗಳನ್ನು ಮಾಡುತ್ತಿದ್ದರು. ಅವರು ಜನರನ್ನು ಹೋರಾಟಕ್ಕೆ ಸೇರಲು ಪ್ರೇರೇಪಿಸುತ್ತಿದ್ದರು ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಇದುವರೆಗೆ 50 ಕ್ಕೂ ಹೆಚ್ಚು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರು ಅನಾರೋಗ್ಯ ಮತ್ತು ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು