ಬೆಂಗಳೂರು(25-10-2020): ಕೋವಿಡ್ ಹಿನ್ನೆಲೆಯಲ್ಲಿ ಕಾಳೇಜುಗಳು ಬಂದ್ ಆಗಿರುವುದರಿಂದ ಸರಕಾರ ಈಗಾಗಲೇ ಪಠ್ಯ ವಿಷಯದಲ್ಲಿ ಶೇ.30ರಷ್ಟು ಕಡಿತಕ್ಕೆ ಸೂಚಿಸದ್ದು, ಪಿಯುಸಿ ಪಠ್ಯದಲ್ಲಿ ಮುಖ್ಯವಾದ ಅಂಶಗಳಿಗೆ ಕತ್ತರಿ ಹಾಕಿದ್ದು, ಶಿಕ್ಷಕರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದ್ವಿತೀಯ ಪಿಯುಸಿ ಇತಿಹಾಸದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನೇ ತೆಗೆದು ಹಾಕಲಾಗಿದೆ. ರಾಜ್ಯಶಾಸ್ತ್ರದಲ್ಲಿ ಭಾರತದ ರಾಜಕೀಯದ ನೂತನ ಪ್ರವೃತ್ತಿ, ಅಸ್ಮಿತೆ, ರಾಜಕೀಯದ ಉಗಮವನ್ನು ತೆಗೆದು ಹಾಕಲಾಗಿದೆ. ಭ್ರಷ್ಟಾಚಾರದ ವಿರುದ್ಧ ಜನತೆ, ಭಯೋತ್ಪಾದನೆ ವಿರುದ್ಧ ಯುವ ಜನಾಂಗ, ಸಮಕಾಲೀನ ರಾಜಕೀಯ ವಿದ್ಯಮಾನಗಳು ಸೇರಿ ಪ್ರಮುಖ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ.
ಕಾಮರ್ಸ್ ನಲ್ಲಿ ಫೈನಾನ್ಶಿಯಲ್ ಮಾರ್ಕೆಟಿಂಗ್, ಮಾರ್ಕೆಟಿಂಗ್ ಇತ್ಯಾದಿ ಪ್ರಸ್ತುತ ವಿಷಯಗಳನ್ನು ಕಡಿತ ಮಾಡಲಾಗಿದೆ. ಪಠ್ಯದಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಅನೇಕ ಅಧ್ಯಾಯಗಳನ್ನು ತೆಗೆದಿರುವುದು ಮುಂದಿನ ಶೈಕ್ಷಣಿಕ ಬದುಕಿಗೆ ಮಾರಕವಾಗಲಿದೆ ಎನ್ನಲಾಗಿದೆ.
ಪ.ಪೂ. ಶಿಕ್ಷಣ ಇಲಾಖೆ ಆಯಾ ವಿಷಯ ತಜ್ಞರ ಸಹಯೋಗದೊಂದಿಗೆ ಶೇ.30 ರಷ್ಟು ಪಠ್ಯ ಕಡಿತಗೊಳಿಸಿ, ಶೇ.70ರಷ್ಟು ಪಠ್ಯ ವನ್ನು ಬೋಧನೆಗೆ ಉಳಿಸಿಕೊಂಡಿದೆ.