ಭಾರತಕ್ಕೆ ಮರಳಿ ಬರುತ್ತಿದೆ ಪಬ್ ಜಿ!

pubg
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(09-10-2020): ಏರ್‌ಟೆಲಿನ ಸಹಕಾರದೊಂದಿಗೆ ಪಬ್ ಜಿ ಮೊಬೈಲ್ ಗೇಮ್ ಭಾರತಕ್ಕೆ ಮರಳಿ ಬರಲು ಸಿದ್ಧವಾಗುತ್ತಿದೆಯೆನ್ನಲಾಗಿದೆ. ಇದಕ್ಕೂ ಮೊದಲು ಜೀಯೊ ಮೂಲಕ ಭಾರತಕ್ಕೆ ಬರಲಿದೆಯೆಂಬ ಸೂಚನೆಗಳಿತ್ತು.

ಈ ವರ್ಷ ಸೆಪ್ಟೆಂಬರ್ ಎರಡರಂದು ಪಬ್‌ಜಿಯೂ ಸೇರಿದಂತೆ 118 ಚೈನೀಸ್ ಆಪ್‌ಗಳಿಗೆ ಭಾರತ ಸರಕಾರವು ನಿಷೇಧ ಹೇರಿತ್ತು. ಸೈಬರ್ ಸ್ಪೇಸ್, ರಕ್ಷಣೆ, ಸುರಕ್ಷತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಹಾಗೂ ಬಳಕೆದಾರರ ಮಾಹಿತಿ ಸೋರಿಕೆಯನ್ನು ತಡೆಗಟ್ಟುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅದು ತಿಳಿಸಿತ್ತು.

ಚೀನಾ, ಲಡಾಖ್ ನ ಕಣಿವೆಯಲ್ಲಿ ನರಿ ಬುದ್ದಿಯನ್ನು ತೋರಿಸಿದ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶಗಳು ಭುಗಿಲೆದ್ದಿದ್ದವು. ಚೀನಾ ವಸ್ತುಗಳನ್ನು, ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು