ಹೊಸದೆಹಲಿ(12/11/2020): ನಿಷೇಧಕ್ಕೊಳಗಾಗಿದ್ದ ದಕ್ಷಿಣ ಕೊರಿಯಾ ಮೂಲದ ಪಬ್ ಜಿ ಗೇಮ್ ಆ್ಯಪ್ ಈಗ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹೌದು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಚೀನಾದ ಇತರ ಆ್ಯಪ್ ಗಳೊಂದಿಗೆ ನಿಷೇಧಕ್ಕೊಳಗಾಗಿದ್ದ ಪಬ್ಜಿ ಈಗ “ಪಬ್ಜಿ ಮೊಬೈಲ್ ಇಂಡಿಯಾ’ ಹೆಸರಿನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಅದಕ್ಕಾಗಿ ಕಂಪೆನಿಯು ಭಾರತದಲ್ಲಿ ನೂರು ಮಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ ಎನ್ನಲಾಗಿದೆ.
ಭಾರತದ ಮಾರುಕಟ್ಟೆಗೆ ತಕ್ಕಂತೆ ಬದಲಾವಣೆಯೊಂದಿಗೆ ಪಬ್ ಜಿ ಇಂಡಿಯಾವನ್ನು ರೂಪಿಸಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರಕಾರದ ನಿಯಮಗಳನ್ನು ಪಾಲಿಸಿ, ಭಾರತೀಯತೆಯನ್ನು ಮೈಗೂಡಿಸಿಕೊಂಡು ಈ ಆ್ಯಪನ್ನು ತಯಾರಿಸಲಾಗಿದೆ. ಮೈಕ್ರೋಸಾಪ್ಟ್ ಕಂಪೆನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗೆಯೇ, ಭಾರತದಲ್ಲೇ ನಿರ್ಮಾಣ ಸಂಸ್ಥೆಯನ್ನು ತೆರೆಯುವ ಉದ್ದೇಶದಿಂದ ಸ್ಥಳೀಯ ಶಾಖೆಯನ್ನೂ ತೆರೆಯುವುದಾಗಿ ಸಂಸ್ಥೆ ಹೇಳಿದೆ.