ಬ್ಯಾನ್ ಬಳಿಕವೂ ಪಬ್ ಜಿ ಆಡುತ್ತಿದ್ದವರಿಗೆ ಶಾಕಿಂಗ್ ಸುದ್ದಿ  

pubg
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(30-10-2020): ಪಬ್ ಜಿ ಬ್ಯಾನ್ ಬಳಿಕವೂ ಪಬ್ ಜೀ ಆರಾಮವಾಗಿ ಆಡುತ್ತಿದ್ದವರಿಗೆ ಶಾಕಿಂಗ್ ಸುದ್ದಿ ಇದಾಗಿದ್ದು, ಇಂದಿನಿಂದ ಭಾರತದಲ್ಲಿ ಪಬ್ ಜೀ ಮೊಬೈಲ್ ಮತ್ತು ಪಬ್ ಜೀ ಮೊಬೈಲ್ ಲೈಟ್ ಎರಡೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ.

ಪಬ್ ಜಿ ಮೊಬೈಲ್ ಆಯಪ್ ಗಳು ಈ ಮೊದಲು ಬ್ಯಾನ್ ಗಿಂತ ಮೊದಲು ಫೋನ್, ಟ್ಯಾಬ್ಲೆಟ್ ಮತ್ತು ಪಿ.ಸಿಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡ ಬಳಕೆದಾರರಿಗೆ ಲಭ್ಯವಿತ್ತು. ಆದರೆ, ಇನ್ನು ಪಬ್ ಜೀ ಮೊಬೈಲ್ ಮತ್ತು ಪಬ್ ಜೀ ಲೈಟ್ ಎರಡೂ ಕಾರ್ಯ ನಿಲ್ಲಿಸಲಿದೆ. APK ಇನ್ ಸ್ಟಾಲ್ ಮಾಡಿಕೊಂಡರೂ PUBG ಮೊಬೈಲ್ ಪ್ಲೇ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಲಡಾಖ್ ನಲ್ಲಿ ಚೀನಾ ತನ್ನ ನರಿ ಬುದ್ದಿಯನ್ನು ಪದರ್ಶಿಸಿದ ಬಳಿಕ ಚೀನಾ ಆಪ್ ಗಳನ್ನು ಭಾರತದಲ್ಲಿ ನಿಷೇಧಿಸಬೇಕೆಂದು ಒತ್ತಡ ಕೇಳಿಬಂದಿತ್ತು. ಆ ಬಳಿಕ ಸರಕಾರ ಚೀನಾ ಆಪ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು