ರಾಜಸ್ಥಾನ; ಗೇಮ್ ಆಡಲು ಮೊಬೈಲ್ ಕೊಡದ ಸ್ನೇಹಿತನನ್ನೇ ಕೊಂದು ಹಾಕಿದ ಬಾಲಕ

pubg
Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಜಸ್ಥಾನ್ /ಜೈಪುರ; ಹದಿಹರೆಯದವರು ಮೊಬೈಲ್ ದಾಸರಾಗಿರುವುದು ನಿಜ. ಆದರೆ, ಮೊಬೈಲ್  ಗಾಗಿ ಕೊಲೆ ಮಾಡುವ ಹಂತಕ್ಕೆ ಹೋಗುವಷ್ಟು ದಾಸರಾಗಿದ್ದಾರೆ ಎಂಬುದು ಆಘಾತಕಾರಿ ವಿಚಾರ.

ಹೌದು ಇಂತಹದ್ದೊಂದು ಘಟನೆ ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ಜೈಪುರದಲ್ಲಿ ನಡೆದಿದೆ. 14 ವರ್ಷದ ಬಾಲಕನೊಬ್ಬ ತನಗೆ ಪಬ್ ಜಿ ಆಡಲು ಮೊಬೈಲ್ ಕೊಡಲಿಲ್ಲ ಎಂದು ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಸುದ್ದಿ ತಿಳಿದು ಸ್ವತಃ ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ.

ಕೊಲೆಯಾದ ಬಾಲಕನನ್ನು ಹಮೀದ್ ಎಂದು ಗುರುತಿಸಲಾಗಿದೆ. ಮೃತ ಹಮೀದ್ ನ ತಂದೆ ಮಗ ನಾಪತ್ತೆಯಾಗಿರುವ ಕುರಿತು ಭೀಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜಸ್ಥಾನದ  ಭರ್ವಾಲಿ ಬೆಟ್ಟದ ಪಕ್ಕದಲ್ಲಿ ಹಮೀದ್ ಮೃತ ದೇಹ ಪತ್ತೆಯಾಗಿದೆ. ಪ್ರಕರಣ ದಾಖಲಾದ  48 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು