‘ಪಬ್ಜಿ’ ಕಾರಣ ನೀಡಿ ಬಾಲಕನ ಕೊಲೆ ಪ್ರಕರಣ | ವಿಚಾರ ಆರೋಪಿಯ ತಂದೆಗೂ ತಿಳಿದಿತ್ತು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉಳ್ಳಾಲಪಬ್ಜಿಯಲ್ಲಿ ಸೋಲಿಸಿದನೆಂಬ ಕಾರಣ ನೀಡಿ ಬಾಲಕನ ಕೊಲೆ ಮಾಡಿದ ವಿಚಾರ ಆರೋಪಿಯ ತಂದೆಗೂ ತಿಳಿದಿತ್ತು ಎಂಬ ವಿಚಾರ ಪೋಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಉಳ್ಳಾಲದ ಹನ್ನೆರಡರ ಹರೆಯದ ಬಾಲಕ ಆಕಿಫನನ್ನು ಹತ್ಯೆ ಮಾಡಿದ ವಿಚಾರವನ್ನು ಆರೋಪಿಯು ತನ್ನ ತಂದೆಗೂ ತಿಳಿಸಿದ್ದನು. ಆದರೆ ತಂದೆ ಸಂತೋಷ್(45) ವಿಚಾರವನ್ನು ಮುಚ್ಚಿಡುವಂತೆ ಮಗನಿಗೆ ನಿರ್ದೇಶನ ನೀಡಿದ್ದನು. ಬಳಿಕ ಮನೆಯಲ್ಲಿಯೇ ತನ್ನ ಮಗನಿಗೆ ರಕ್ಷಣೆಯನ್ನೂ ನೀಡಿದ್ದನು.

ಈ ನಡುವೆ ದೇಶದಲ್ಲಿ ನಿಷೇಧವಾಗಿರುವ ಪಬ್ಜಿ ಮಕ್ಕಳ ಕೈಗೆ ಸಿಗುವುದಾದರೂ ಹೇಗೆ ಎಂಬ ಅನುಮಾನವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಪಬ್ಜಿಯ ಬೇರೆ ವರ್ಸನ್ ಬಂದಿದೆಯೆಂಬ ವಾದವನ್ನೂ ಕೆಲವರು ಮುಂದಿಟ್ಟಿದ್ದಾರೆ.

ಇದೀಗ ಕೆ.ಸಿ.ರೋಡ್ ಪಿಲಿಕೂರು ನಿವಾಸಿ ಸಂತೋಷನನ್ನು ಬಂಧಿಸಲಾಗಿದೆ. ಆತನ  ಹದಿನೇಳು ವಯಸ್ಸಿನ ಮಗನನ್ನು ರಿಮ್ಯಾಂಡ್ ಹೋಮಿಗೂ ಕಳುಹಿಸಲಾಗಿದೆ.

ಲಾರಿ ಚಾಲಕನಾಗಿರುವ ಸಂತೋಷ್ ಉತ್ತರ ಪ್ರದೇಶ ಮೂಲದವನಾಗಿದ್ದು, ಕಳೆದ ಮೂವತ್ತು ವರ್ಷಗಳಿಂದ ತಲಪಾಡಿಯಲ್ಲೇ ವಾಸಿಸುತ್ತಿದ್ದಾನೆ. ಸದ್ಯ ಈತನ ಮನೆಯಲ್ಲಿ ಪತ್ನಿ ಮತ್ತು ಇನ್ನೊಬ್ಬ ಮಗನಿದ್ದು, ಮುಂಜಾಗರೂಕತಾ ಕ್ರಮವಾಗಿ ಮನೆಗೆ ಪೋಲೀಸ್ ರಕ್ಷಣೆ ನೀಡಲಾಗುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು