ಪೊಲೀಸ್ ಇಲಾಖೆಗೆ ಮುಜುಗರ ತಂದಿಟ್ಟ ಪಿಎಸ್ ಐ ಡ್ರಾಮ| ವೈರಲ್ ವಿಡಿಯೋ

psi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರಗಿ(22-10-2020): ಪಿಎಸ್ ಐ ನಾಟಕ ಇಡೀ ಇಲಾಖೆಗೆ ಇರುಸುಮುರುಸು ಉಂಟುಮಾಡಿರುವ ಘಟನೆ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ.

ಜೇವರ್ಗಿ ತಾಲೂಕಿನ ನೆಲೋಗಿ ಪಿಎಸ್‌ಐ ಮಲ್ಲಣ್ಣ ‌ಯಲಗೋಡ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಕುರಿ ಮರಿಗಳನ್ನು ರಕ್ಷಣೆ ಮಾಡಿದ್ದೇನೆ ಎಂಬಂತೆ ಬೇರೆ ಕಡೆಯಿಂದ ‌ಕುರಿ‌ ಮರಿಗಳನ್ನು ತಂದು ಕೈಯಲ್ಲಿ ಹಿಡಿದುಕೊಂಡು ಪ್ರವಾಹದ ನೀರಿನಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಂಡಿದ್ದರು.

PRESS KANNADA

ಆದರೆ ಈ ಕುರಿತ ವಿಡಿಯೋ ವೈರಲ್ ಆಗಿದ್ದು, ನಾಲ್ವರು ಯುವಕರ ಸಹಾಯದಿಂದ ತೆಪ್ಪದ ಮೇಲೆ ಪಿಎಸ್‌ಐ ನೀರಿನಲ್ಲಿ ನಿಂತಿದ್ದಾರೆ.‌ ಆರಂಭದಲ್ಲಿ ಸ್ವಲ್ಪವೇ ನೀರಿದ್ದರೂ ಯುವಕರಿಂದ ತೆಪ್ಪವನ್ನು ತಳ್ಳಿಸಿಕೊಂಡು ತಾನು ಹೀರೋ ತರಹ ಇನ್ಸ್ ಪೆಕ್ಟರ್ ಪೋಸ್ ಕೊಟ್ಟಿದ್ದಾರೆ.

ಬಟ್ಟೆ ತೊಯ್ಯಬಾರದೆಂದು ಮೀನುಗಾರರ ತೆಪ್ಪದಲ್ಲಿ ಹೋಗುವ ಅಧಿಕಾರಿ, ಪ್ರವಾಹದ ನೀರಿನಲ್ಲಿಯೇ ಗ್ರಾಮಸ್ಥರ ಮೂಲಕ ತೆಪ್ಪ ತಳ್ಳಿಸಿಕೊಂಡು ಹೋಗಿದ್ದಾರೆ. ಮೀನು ಹಿಡಿಯಲು ಬಳಸುವ ಎರಡು ತೆಪ್ಪಗಳ ಮೇಲೆ ಎರಡು ಕಾಲಿಟ್ಟು ಸಿಂಗಂ ರೀತಿಯಲ್ಲಿ ಸ್ಟೈಲ್ ಮಾಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು