ಮಂಗಳೂರು: ಅ.28ಕ್ಕೆ ಜನಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ

protest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(15-10-2020): ಸರ್ಕಾರಿ ಆಸ್ಪತ್ರೆ ಬಲಪಡಿಸುವಂತೆ ಒತ್ತಾಯಿಸಿ ಆ.28ಕ್ಕೆ ತೊಕ್ಕೊಟ್ಟಿನಲ್ಲಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ  ನಡೆಯಲಿದೆ.

ಸರ್ಕಾರಿ ಆಸ್ಪತ್ರೆ ಬಲಪಡಿಸಿರಿ, ಖಾಸಗಿ ಆಸ್ಪತ್ರೆ ನಿಯಂತ್ರಿಸಿರಿ ಎಂಬ ಅಭಿಯಾನದ ಅಂಗವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರ ( ಉಳ್ಳಾಲ ) ದಲ್ಲಿ ಹಮ್ಮಿಕೊಳ್ಳಬೇಕಾದ ಹೋರಾಟದ ಬಗ್ಗೆ ಚರ್ಚಿಸಲು ಕ್ಷೇತ್ರದ ಸಾಮಾಜಿಕ ಹೋರಾಟಗಾರರು, ಪ್ರಗತಿಪರರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ ಇಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕ್ಲಿಕ್ ಸಭಾಂಗಣದಲ್ಲಿ ನಡೆಯಿತು.

ಅ. 28 ರಂದು ತೊಕ್ಕೊಟ್ಟು ನಾಡ ಕಚೇರಿ ಮುಂಭಾಗ ಬೃಹತ್ ಧರಣಿ ನಡೆಸಲು ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಕೆಸಿ ರೋಡ್ ವಹಿಸಿದ್ದರು. ಸರ್ಕಾರಿ ಆಸ್ಪತ್ರೆ ಬಲಪಡಿಸಿರಿ , ಖಾಸಗಿ ಆಸ್ಪತ್ರೆ ನಿಯಂತ್ರಿಸಿರಿ ಅಭಿಯಾನದ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಭೆಗೆ ಮಾಹಿತಿ ನೀಡಿದರು. ಹೋರಾಟದ ರೂಪುರೇಷೆಗಳ ಬಗ್ಗೆ ಸಿಪಿಐಎಂ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್, ಸಾಮಾಜಿಕ ಹೋರಾಟಗಾರ ದಿನೇಶ್ ಕುಂಪಲ, ಜೆಡಿಎಸ್ ಮುಖಂಡ ಯು.ಎಚ್ ಫಾರೂಕ್ ಉಳ್ಳಾಲ್, ಡಿವೈಎಫ್ಐನ ಜೀವನ್ ರಾಜ್ ಕುತ್ತಾರ್ , ಕೋಟೆಕಾರ್ ಬ್ಯಾಂಕ್ ನಿರ್ದೇಶಕ ಅರುಣ್ ಕುಮಾರ್, ಜನವಾದಿ ಮಹಿಳಾ ಸಂಘಟನೆಯ ವಿಲಾಸಿನಿ ತೊಕ್ಕೊಟ್ಟು, ಬೀಡಿ ಕಾರ್ಮಿಕರ ಸಂಘದ ಪದ್ಮಾವತಿ ಶೆಟ್ಟಿ, ದಲಿತ ಹಕ್ಕುಗಳ ಸಮಿತಿಯ ನಾರಾಯಣ ತಲಪಾಡಿ, ಕಟ್ಟಡ ಕಾರ್ಮಿಕರ ಸಂಘದ ಜನಾರ್ದನ ಕುತ್ತಾರ್ ಮಾತನಾಡಿದರು.

ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ನಾಯಕ ರಫೀಕ್ ಹರೇಕಳ, ಗ್ರಾಪಂ ಮಾಜಿ ಸದಸ್ಯ ಅಶ್ರಫ್ ಹರೇಕಳ, ಕಟ್ಟಡ ಕಾರ್ಮಿಕರ ಸಂಘದ ರಾಮಚಂದ್ರ ಪಜೀರ್, ಬಾಬು ಪಿಲಾರ್, ಇಬ್ರಾಹಿಂ ಮದಕ, ದಲಿತ ಹಕ್ಕು ಸಮಿತಿಯ ರೋಹಿದಾಸ್ ಅಬ್ಬಂಜರ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಜಗದೀಶ್ ನಾಯ್ಕ್ ದೇರಳಕಟ್ಟೆ, ಅಖಿಲ ಭಾರತ ಕಿಸಾನ್ ಸಭಾದ ಸಂಜೀವ ಪಿಲಾರ್, ಮಹಾಬಲ ದೆಪ್ಪಲಿಮಾರ್, ಶೇಖರ್ ಕುತ್ತಾರ್, ನವೀನ್ , ರೂಪೇಶ್ ಕುತ್ತಾರ್, ಚಂದ್ರಹಾಸ್ ಕುತ್ತಾರ್, ಪೃಥ್ವಿರಾಜ್, ಹರೀಶ್ ಕೆರೆಬೈಲ್ , ಡಿವೈಎಫ್ಐ ನ ರಝಾಕ್ ಮುಡಿಪು, ನವಾಜ್ ದೇರಳಕಟ್ಟೆ ಮತ್ತಿರರು ಉಪಸ್ಥಿತರಿದ್ದರು. ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಕಾರ್ಯದರ್ಶಿ ಸುನಿಲ್ ತೇವುಲ ಕಾರ್ಯಕ್ರಮ ನಿರೂಪಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು