ಉತ್ತರ ಪ್ರದೇಶ(26-11-2020): ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ವನ್ನು ಜಾರಿಗೊಳಿಸಿದೆ.
ಎಸ್ಮಾ ಕಾಯ್ದೆಯ ಪ್ರಕಾರ 6 ತಿಂಗಳು ರಾಜ್ಯ ಸರ್ಕಾರಿ ಇಲಾಖೆಗಳಲ್ಲಿನ ನೌಕರರು ಮುಷ್ಕರವನ್ನು ಮಾಡಬಾರದು. ನಿಯಮವನ್ನು ಮೀರಿದರೆ 1,000ರೂ.ದಂಡ ಮತ್ತು 1ವರ್ಷ ದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಎಸ್ಮಾ ಜತೆಯಲ್ಲಿ ಸಿಆರ್ಪಿಸಿಯ ಸೆಕ್ಷನ್ 144ನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ಕುರಿತು ರಾಜ್ಯಪಾಲರ ಜೊತೆ ಚರ್ಚೆ ನಡೆಸಿ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಉತ್ತರ ಪ್ರದೇಶ ಸರಕಾರ ತಿಳಿಸಿದೆ.