ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಆಗ್ರಹಿಸಿ ಧರಣಿ 

protest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ (18-10-2020): ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಖಾಸಗಿ ಆಸ್ಪತ್ರೆ ಗಳನ್ನು ನಿಯಂತ್ರಿಸಲು ಆಗ್ರಹಿಸಿ ಧರಣಿ  ಸತ್ಯಾಗ್ರಹವನ್ನು ಅ.10ರಂದು ಬಂಟ್ವಾಳ ಶಾಸಕರ ಕಚೇರಿ ಮುಂದೆ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂಭಾಗ ನಡೆಸಲಾಗುವುದು ಎಂದು ಸಂಘಟಕರು ‌ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಸಾರ್ವಜನಿಕ‌ ಆರೋಗ್ಯ ಕ್ಷೇತ್ರವನ್ನು ಸರಕಾರ ಕಡೆಗಣಿಸುತ್ತಿರುವುದರ ಪರಿಣಾಮ ಜನಸಾಮಾನ್ಯರು ಗುಣಮಟ್ಟದ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗಳು ಜನರ ಅನಾರೋಗ್ಯಕ್ಕೆ ಪರಿಹಾರ ಒದಗಿಸಲು ವಿಫಲವಾಗಿದ್ದರೆ, ಖಾಸಗಿ ಆಸ್ಪತ್ರೆಗಳ ನಿಯಮ ಬಾಹಿರ ದುಬಾರಿ ದರಗಳು ಜನಸಾಮಾನ್ಯರ ಬದುಕುವ ಹಕ್ಕನ್ನೆ ನಿರಾಕರಿಸುತ್ತಿದೆ. ಆರೋಗ್ಯ ಕ್ಷೇತ್ರದ ಇಂತಹ ನಿರ್ಲಜ್ಜ ವ್ಯಾಪಾರೀಕರಣ ನೀತಿಯ ವಿರುದ್ದ ಆರೋಗ್ಯ ಕ್ಷೇತ್ರದ ಈ  ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು