ಫ್ರಾನ್ಸ್(17-10-2020): ಪ್ರವಾದಿ ಮುಹಮ್ಮದರ ವ್ಯಂಗ್ಯಚಿತ್ರಗಳನ್ನು ತರಗತಿಯಲ್ಲಿ ತೋರಿಸಿದ ಫ್ರಾನ್ಸ್ನ ಇತಿಹಾಸ ಶಿಕ್ಷಕನೋರ್ವನ ಶಿರಚ್ಚೇದನ ನಡೆಸಲಾಗಿದೆ ಎಂದು ಪ್ರಾನ್ಸ್ ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಯ ಕರೆ ಬಂದ ನಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಫ್ರೆಂಚ್ ರಾಜಧಾನಿಯ ಪಶ್ಚಿಮ ಉಪನಗರವಾದ ಕಾನ್ಫ್ಲಾನ್ಸ್ ಸೇಂಟ್-ಹೊನೊರಿನ್ನಲ್ಲಿರುವ ಶಾಲೆಯ ಬಳಿ ಸಂಜೆ 5 ಗಂಟೆಗೆ ಪ್ಯಾರಿಸ್ ಹೊರವಲಯದಲ್ಲಿ ನಡೆದ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಫ್ರೆಂಚ್ ಭಯೋತ್ಪಾದನಾ ವಿರೋಧಿ ಅಭಿಯೋಜಕರು ತಿಳಿಸಿದ್ದಾರೆ.
ಪೊಲೀಸ್ ಮೂಲವೊಂದರ ಪ್ರಕಾರ, ಬಲಿಪಶು ಇತಿಹಾಸ ಶಿಕ್ಷಕನಾಗಿದ್ದು, ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ತರಗತಿಯಲ್ಲಿ ಚರ್ಚಿಸಿದ್ದಾನೆ.
ಶಿರಚ್ಛೇದನ ಮಾಡಿದಾತನಿಗೆ “ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಇದೆ ಎಂದು ಪೊಲೀಸರು ಹೇಳಿದ್ದಾರೆ.