ದಲಿತ ಸಮುದಾಯದವರನ್ನು ಯಾರಾದರು ಮತಾಂತರ ಮಾಡಿದರೆ 3ರಿಂದ 10 ವರ್ಷ ಜೈಲು ಶಿಕ್ಷೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಹಲವು ವಿರೋಧಗಳ ನಡುವೆಯೂ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯಿದೆಯು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಅನೇಕರಿಂದ ವಿರೋಧಾಭಾಸ ವ್ಯಕ್ತವಾಗುತ್ತಿದೆ.

ಎಸ್ ಸಿ, ಎಸ್ ಟಿ ಒಳಗೊಂಡ ದಲಿತ ಸಮುದಾಯದವರನ್ನು ಯಾವುದೇ ಧರ್ಮದವರು ಮತಾಂತರ ಮಾಡಿದರೆ ಅವರಿಗೆ 3-10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಲಾಗುವುದು ಎಂದು ಈ ಮಸೂದೆಯ ಮೂಲಕ ದಲಿತರನ್ನು ಮತಾಂತರ ಮಾಡುವವರಿಗೆ ಸರಕಾರ ಎಚ್ಚರಿಕೆಯನ್ನು ನೀಡಿದೆ.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ ಪಿ ಪಕ್ಷದಿಂದ ಉಚ್ಛಾಟನೆಗೊಂಡು ಬಿಜೆಪಿ ಸೇರಿದ್ದ ದಲಿತ ನೇತಾರ ಎನ್ ಮಹೇಶ್ ” ಈ ಕಾಯಿದೆಯ ಅಗತ್ಯತೆಯ ಕುರಿತು ಸರಕಾರವೇ ತಿಳಿಸಬೇಕಾಗಿದೆ. ಇದರ ಕುರಿತು ನಾನು ಹೆಚ್ಚುವರಿ ಅಧ್ಯಯನವನ್ನು ಮಾಡುತ್ತೇನೆ. ಈ ಕಾಯಿದೆಯನ್ನು ಅಂಬೇಡ್ಕರ್ ವಾದದ ಆಯಾಮಗಳಲ್ಲಿ ಖಂಡಿತವಾಗಿಯೂ ನಾನು ಮತ್ತೆ ಕಲಾಪದಲ್ಲಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ದಲಿತ ಸಮುದಾಯದವರು ಹೆಚ್ಚಾಗಿ ತಮ್ಮ ಜಾತಿಯನ್ನು ತೊರೆದು ಇನ್ನೊಂದು ಧರ್ಮಕ್ಕೆ ಮತಾಂತರವಾಗುವದನ್ನೇ ಕೆಂಗಣ್ಣಿನಲ್ಲಿ ಇಟ್ಟುಕೊಂಡು ಸರಕಾರ ಈ ರೀತಿಯ ಕಟ್ಟಲೆಯನ್ನು ಜಾರಿಗೊಳಿಸಿದೆ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು