ನವದೆಹಲಿ(04-02-2021): ಸಾಹಿತಿ ಪ್ರೊ. ಭಗವಾನ್ ಅವರ ಮೇಲೆ ಬಿಜೆಪಿ ಪರ ವಕೀಲೆ ಮೀರಾ ರಾಘವೇಂದ್ರ ಕೋರ್ಟ್ ಆವರಣದಲ್ಲಿ ಮಸಿ ಬಳಿದಿರುವ ಘಟನೆ ನಡೆದಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಕೋರ್ಟ್ ಗೆ ಬಂದಾಗ ಘಟನೆ ನಡೆದಿದೆ. ಘಟನೆ ಬಳಿಕ ಭಗವಾನ್ ಹಲಸೂರ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ.
ಹಿಂದೂ ಧರ್ಮ ಮತ್ತು ರಾಮನ ಬಗ್ಗೆ ಅವಹೇಳನಕಾರಿಯಾಗಿ ಭಗವಾನ್ ಮಾತನಾಡುತ್ತಾರೆ. ಇದರಿಂದ ಕೃತ್ಯವನ್ನು ಎಸಗಿರುವುದಾಗಿ ಮೀರಾ ಹೇಳಿಕೊಂಡಿದ್ದಾರೆ.
ಬುದ್ಧಿಜೀವಿ, ಧರ್ಮ ವಿರೋಧಿ #ಫ್ರೊಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. #ಜೈಶ್ರೀರಾಮ್🚩🚩🚩 pic.twitter.com/t0iF36VR3x
— Meera Raghavendra (@MeeraRaghavendr) February 4, 2021