ಪ್ರಯಾಗ್ ರಾಜ್(21-02-2021): ಪ್ರಿಯಾಂಕಾ ಗಾಂಧಿ ಯುಪಿಯ ಪ್ರಯಾಗರಾಜ್ ಗೆ ತೆರಳಿ, ಸ್ಥಳೀಯ ಪೊಲೀಸರಿಂದ ಕಿರುಕುಳಕ್ಕೊಳಗಾದ ದೋಣಿಗಾರರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಉತ್ತರಪ್ರದೇಶದ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಪ್ರಯಾಗ್ರಾಜ್ ತಲುಪಿದ್ದಾರೆ. ಪ್ರಿಯಾಂಕಾ ಗ್ರಾಮಸ್ಥರು ಮತ್ತು ಮೀನುಗಾರ ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸಿದ್ದಾರೆ.
ಈ ಹಿಂದೆ, ಪ್ರಿಯಾಂಕಾ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮಕ್ಕೆ ತೆರಳಿದಾಗ ಸುಜಿತ್ ನಿಷಾದ್ ಅವರ ಬೋಟ್ ನಲ್ಲಿ ಪ್ರಯಾಣಿಸಿದ್ದರು. ಪ್ರಯಾಣದ ವೇಳೆ ನಿಶಾದ್ ತನ್ನ ಸಮುದಾಯಕ್ಕೆ ಸೇರಿದ ದೋಣಿಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕ ಅವರಿಗೆ ತಿಳಿಸಿದ್ದರು, ಅವರ ವಿರುದ್ಧ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪಿಸಿದ್ದರು. ದಬ್ಬಾಳಿಕೆಯ ವಿರುದ್ಧ ದನಿ ಎತ್ತಲು ದೋಣಿಗಾರ ಪ್ರಿಯಾಂಕ ಅವರ ಸಹಾಯವನ್ನು ಕೋರಿದ್ದರು.