ಹೊಸದೆಹಲಿ(16/10/2020): ‘ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದ್ದು, ಕಳೆದ ವಾರದಲ್ಲೇ ಮಹಿಳೆಯರಿಗೆ ಸಂಬಂಧಿಸಿದಂತೆ 13 ಭೀಕರ ಅಪರಾಧ ಪ್ರಕರಣಗಳು ನಡೆದಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಯೋಗಿ ಆದಿತ್ಯನಾಥ ಸರಕಾರವು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಕಳೆದ ವಾರವೊಂದರಲ್ಲಿಯೇ ರಾಜ್ಯದಲ್ಲಿ ಮಹಿಳೆಯರ ಮೇಲೆ 13 ಭೀಕರ ಅಪರಾಧ ಪ್ರಕರಣಗಳು ಸಂಭವಿಸಿದ್ದರೂ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ವಿಶೇಷ ಅಧಿವೇಶನ ನಡೆಸುವಷ್ಟು ಪುರುಸೊತ್ತೂ ಮುಖ್ಯಮಂತ್ರಿಯವರಿಗಿಲ್ಲ. ಅವರು ಪೋಟೋ ತೆಗೆಯುವುದರಲ್ಲಿ ಬ್ಯುಝಿಯಾಗಿದ್ದಾರೆ’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.