ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಸುದ್ದಿ| ದೇವನಹಳ್ಳಿಯಲ್ಲಿ ಅಪ್ರಾಪ್ತ ಮುಸ್ಲಿಂ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ದೇವಸ್ಥಾನದ ಅರ್ಚಕ

rape
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(26-11-2020): ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಮುಸ್ಲಿಂ ಬಾಲಕಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಕಥುವಾ ಆಸಿಫಾ ಪ್ರಕರಣವನ್ನು ಮತ್ತೆ ನೆನಪಿಸಿದೆ.

10ವರ್ಷದ ಸಂತ್ರಸ್ತ ಬಾಲಕಿ ದೇವನಹಳ್ಳಿ ಸಮೀಪದ ಚೌಡೇಶ್ವರಿ ದೇವಸ್ಥಾನದ  ಬಳಿ ಆಟವಾಡುತ್ತಿದ್ದಳು. ಬಳಿಕ ನಾಪತ್ತೆಯಾಗಿದ್ದಳು. ಅಲ್ಲಿಯೇ ಇದ್ದ ಮುನಿಯಮ್ಮ ಅವರನ್ನು ಕೇಳಿದಾಗ ಸಂತ್ರಸ್ತ ಬಾಲಕಿ ದೇವಸ್ಥಾನದ ಬದಿಯಲ್ಲಿ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಬಾಲಕಿಯ ತಂದೆ ಹೋಗಿ ನೋಡಿದಾಗ ಬಾಲಕಿ ದೇವಸ್ಥಾನದ ಅರ್ಚಕನ ಮನೆಯಿಂದ ಅಳುತ್ತಾ ಹೊರ ಬರುತ್ತಿದ್ದಳು. ಈ ವೇಳೆ ಬಾಲಕಿಯನ್ನು ವಿಚಾರಿಸಿದಾಗ ದೇವಸ್ಥಾನದ ಅರ್ಚಕ ವೆಂಕಟರಮಣಪ್ಪ ಅತ್ಯಾಚಾರ ಮಾಡಿರುವ ಬಗ್ಗೆ ಹೇಳಿದ್ದಾಳೆ. ತಕ್ಷಣ ಎಚ್ಚೆತ್ತ ಬಾಲಕಿಯ ಪೋಷಕರು ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 61ವರ್ಷದ ಅರ್ಚಕ ವೆಂಕಟರಮಣಪ್ಪನನ್ನು ಬಂಧಿಸಿದ್ದಾರೆ.

ದೇವಸ್ಥಾನದ ಆರ್ಚಕನೊಬ್ಬ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಗಳೂರು ಜಿಲ್ಲಾಧ್ಯಕ್ಷ  ಮುಹಮ್ಮದ್ ಝುಬೆರ್, ಕಥುವಾ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ನಡೆದ ಈ ಅಮಾನವೀಯ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಉತ್ತರ ಪ್ರದೇಶದ ರೀತಿ ಆರೋಪಿಯನ್ನು ರಕ್ಷಣೆ ಮಾಡಲು ಹೊರಟರೆ ಉಗ್ರ ಹೋರಾಟ ಮಾಡಲಾಗವುದು ಎಂದು ಹೇಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು