ನವದೆಹಲಿ(08-11-2020): ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಜಯಗಳಿಸಿದ ನಂತರ, ಡೆಮೋಕ್ರೆಟಿಕ್ ಪಕ್ಷದ ಜೋ ಬಿಡನ್ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದು, ಅಮೆರಿಕಾದ ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಇದು. ಇದರಿಂದಾಗಿ ನನ್ನನ್ನು ಮತ್ತು ಉಪಾಧ್ಯಕ್ಷರಾಗಿ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಎರಡು ಅವಧಿಯ ಉಪಾಧ್ಯಕ್ಷ ಮತ್ತು ಸೆನೆಟ್ ಅನುಭವಿ ಬಿಡೆನ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಯುಎಸ್ ನ 46 ನೇ ಅಧ್ಯಕ್ಷರಾಗಿ ಗೆದ್ದರು. ಅಮೆರಿಕಾದ ಜನರು ನನ್ನ ಮೇಲೆ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಹ್ಯಾರಿಸ್ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಗೌರವಿಸುತ್ತೇನೆ ಮತ್ತು ವಿನಮ್ರನಾಗಿದ್ದೇನೆ. ದಾಖಲೆಯ ಸಂಖ್ಯೆಯ ಅಮೆರಿಕನ್ನರು ನನಗೆ ಮತ ಚಲಾಯಿಸಿದ್ದಾರೆ. ನಮ್ಮ ರಾಷ್ಟ್ರಕ್ಕಾಗಿ ನಾವೆಲ್ಲಾ ಒಟ್ಟಿಗೆ ಸೇರುವ ಸಮಯ. ಅಮೆರಿಕವನ್ನು ಒಗ್ಗೂಡಿಸುವ ಸಮಯ ಎಂದು ಬಿಡೆನ್ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಅಧಿಕಾರ ವಹಿಸಿಕೊಳ್ಳುವ ಮೊದಲೇ ಕೆಲಸ ಆರಂಭಿಸಿದ್ದಾರೆ. ಅಮೆರಿಕದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳ ಕುರಿತಾಗಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.