ಪ್ರತಿ ಕುಟುಂಬಕ್ಕೆ ಕನಿಷ್ಠ 10 ಸಾವಿರ ಆರ್ಥಿಕ ನೆರವು ಹಾಗೂ 10ಕೆಜಿ ಅಕ್ಕಿ ನೀಡಿ : ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪನವರೇ ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಾಪೆಯ ಕೆಳಗೆ ನುಸುಳುವ ಕೆಲಸ ಮಾಡಿದ್ದೀರೆಂದು ಗೊತ್ತಿದೆ.
ಅಧಿಕೃತವಾಗಿ ಘೋಷಿಸಿದರೆ ನೆರವು ನೀಡಬೇಕಾದ ಅನಿವಾರ್ಯ ಬರುತ್ತದೆಂದು ಅನಧಿಕೃತ ಲಾಕ್‌ಡೌನ್ ಜಾರಿಗೊಳಿಸಿದಿರಿ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ,
‘ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಚಾಲಕರು, ದಿನಗೂಲಿ ನೌಕರರು ಉಪವಾಸ ಮಲಗುತ್ತಿದ್ದಾರೆ.
ನಿಮ್ಮ ಅನಧಿಕೃತ ಲಾಕ್‌ಡೌನ್ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕೂಡಲೇ ಪ್ರತಿ ಅರ್ಹ ಕುಟುಂಬಕ್ಕೆ ಕನಿಷ್ಠ ₹   10 ಸಾವಿರ ಆರ್ಥಿಕ ನೆರವು, ಅನ್ನಭಾಗ್ಯ ಅಕ್ಕಿಯನ್ನು 10ಕೆಜಿ, ಸಣ್ಣ ವ್ಯಾಪಾರಿಗಳು, ಚಾಲಕರಿಗೆ ಪ್ಯಾಕೇಜ್ ನೀಡಿ, MSME ಗಳಿಗೆ ಅಗತ್ಯ ನೆರವು ನೀಡಿ ಉದ್ಯೋಗ ನಷ್ಟವಾಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದೆ.

 

ಮತ್ತೆ ಮತ್ತೆ ಹೇಳುತ್ತೇವೆ, ಕರೋನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು, ಅವರ ಸುಳ್ಳು, ಭ್ರಷ್ಟಾಚಾರ, ನಿರ್ಲಕ್ಸ್ಯ, ನಿರ್ಲಜ್ಜತನವೇ ಇಂದಿನ ಈ ಎಲ್ಲಾ ಅನಾಹುತಗಳಿಗೆ ಕಾರಣ ಎಂದು ಟೀಕಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು